ಡೋಲೋ ಮಾರಾಟ : IT ತನಿಖೆಯಿಂದ ಅಕ್ರಮ ಬಯಲು

ಗುರುವಾರ, 14 ಜುಲೈ 2022 (13:51 IST)
ಬೆಂಗಳೂರು : ಕೋವಿಡ್ ಸಂದರ್ಭದಲ್ಲಿ ನಡೆದ ವಂಚನೆಯ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದ್ದು,

ಡೋಲೋ-650 ಮಾತ್ರೆಯ ಪ್ರಚಾರಕ್ಕಾಗಿ 1 ಸಾವಿರ ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರಿಗೆ ನೀಡಲಾಗಿದೆ ಎಂಬ ಆತಂಕಕಾರಿ ಅಂಶ ತನಿಖೆ ವೇಳೆ ಬಯಲಾಗಿದೆ.

ಕೋವಿಡ್ ಸಾಂಕ್ರಾಮಿಕದ ವೇಳೆ ದೇಶಾದ್ಯಂತ ಬಹುತೇಕ ಸೋಂಕಿತರಿಗೆ ವೈದ್ಯರು ಮತ್ತು ಮೆಡಿಕಲ್ ಶಾಪ್ಗಳಲ್ಲಿ ಬೆಂಗಳೂರು ಮೂಲಕದ ಮೈಕ್ರೋಲ್ಯಾಬ್ ಕಂಪೆನಿ ಉತ್ಪಾದಿಸುವ ಡೋಲೋ-650 ಮಾತ್ರೆಗಳನ್ನು ಪ್ರಮುಖವಾಗಿ ಶಿಫಾರಸು ಮಾಡಲಾಗಿತ್ತು.

ಆದರೆ ಇದೇ ಕಂಪೆನಿ ತನ್ನ ಉತ್ಪನ್ನವನ್ನೇ ಹೆಚ್ಚಾಗಿ ಮಾರಾಟ ಮಾಡಲು ವೈದ್ಯರು ಹಾಗೂ ವೃದ್ಯಕೀಯ ಅಧಿಕಾರಿ ವರ್ಗದವರಿಗೆ 1 ಸಾವಿರ ಕೋಟಿ ಮೌಲ್ಯದ ಉಡುಗೊರೆಗಳನ್ನು ನೀಡಿತ್ತು ಎಂಬ ಸ್ಫೋಟಕ ವಿಚಾರ ತನಿಖೆ ವೇಳೆ ಕಂಡುಬಂದಿದೆ.

ಬೆಂಗಳೂರು ಸೇರಿದಂತೆ 50 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ವೈದ್ಯರು ಮತ್ತು ವೈದ್ಯಕೀಯ ಅಧಿಕಾರಿಗಳನ್ನ ಪ್ರವಾಸಕ್ಕೆ ಕಳಿಸಿರುವುದು, ಹಣಕಾಸು ನೀಡಲು 1 ಸಾವಿರ ಕೋಟಿ ಉಡುಗೊರೆಗಳನ್ನು ನೀಡಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕೃತ ಪತ್ರಿಕಾ ಹೇಳಿಕೆ ನೀಡಿದೆ. 

ಪತ್ರಿಕಾ ಹೇಳಿಕೆಯಲ್ಲಿ 1,000 ಕೋಟಿ ಹಣ ಖರ್ಚು ಮಾಡಿರೋದನ್ನ ಉಲ್ಲೇಖಿಸಲಾಗಿದೆ. ಇದರೊಂದಿಗೆ 300 ಕೋಟಿಯಷ್ಟು ಅಕ್ರಮ ಆಸ್ತಿ ಪತ್ತೆಮಾಡಿದ್ದು, 1.20 ನಗದು ಹಣ ಹಾಗೂ 1.40 ಕೋಟಿ ವಜ್ರದ ಆಭರಣಗಳನ್ನು ವಶಕ್ಕೆ ಪಡೆದಿರುವಾಗಿ ಉಲ್ಲೇಖಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ