ಭೂಕಂಪ : ಮೃತರ ಸಂಖ್ಯೆ 21 ಸಾವಿರಕ್ಕೆ ಏರಿಕೆ!

ಶನಿವಾರ, 11 ಫೆಬ್ರವರಿ 2023 (09:23 IST)
ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಥರ್ಮಲ್ ಕ್ಯಾಮೆರಾಗಳನ್ನ ಹೊಂದಿರುವ ಚಿಕ್ಕ ವಾಹನಗಳಿಂದ ಮೈಕ್ರೋಫೋನ್ ಕಳುಹಿಸಿ ಬದುಕಿರುವ ಜನರನ್ನು ಹುಡುಕಲಾಗುತ್ತಿದೆ. ಡ್ರೋನ್ ಕ್ಯಾಮೆರಾಗಳು ಮತ್ತು ರೋಬೋಟ್ ಗಳನ್ನು ಬಳಸಲಾಗುತ್ತಿದೆ.

ಸಣ್ಣ, ಅತಿಸಣ್ಣ ಪ್ರದೇಶಗಳಲ್ಲಿ ಆಕ್ಸಿಜನ್ ಪೈಪ್ಗಳನ್ನ ಕಳುಹಿಸಿ ಉಸಿರಾಟದ ಮೂಲಕ ಜನರ ಇರುವಿಕೆಯನ್ನು ಖಚಿತಪಡಿಸಕೊಳ್ಳಲಾಗುತ್ತಿದೆ. ಗುರುವಾರ 44 ಗಂಟೆಗಳಿಂದ ಕಟ್ಟಡದ ಅವಶೇಷಗಳ ಅಡಿಯಲ್ಲಿದ್ದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.

ಈ ನಡುವೆ ಟರ್ಕಿ ಮತ್ತು ಸಿರಿಯಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 21 ಸಾವಿರಕ್ಕೆ ಏರಿಕೆಯಾಗಿದೆ. ಸದ್ಯದಮಟ್ಟಿಗೆ ಟರ್ಕಿಯಲ್ಲಿ 17,674 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ ಕನಿಷ್ಠ 3,377 ಜನರು ಸಾವನ್ನಪ್ಪಿದ್ದಾರೆ. ಈವರೆಗೆ 70 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಸುಮಾರು 3 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಕಚ್ಚಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ