ಸೆರಮ್ ಸಂಸ್ಥೆಯ 2ನೇ ಲಸಿಕೆ ತುರ್ತು ಬಳಕೆ?

ಮಂಗಳವಾರ, 28 ಡಿಸೆಂಬರ್ 2021 (08:44 IST)
ನವದೆಹಲಿ : ಸೆರಮ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆ ಕೋವೊವ್ಯಾಕ್ಸ್ ತುರ್ತು ಬಳಕೆಗೆ ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಅಮಿತಿ ಸೋಮವಾರ ಶಿಫಾರಸು ಮಾಡಿದೆ.

ಕೋವೊವ್ಯಾಕ್ಸ್ ತುರ್ತು ಬಳಕೆಗೆ ಅವಕಾಶ ನೀಡುವಂತೆ ಸೆರಮ್ ಸಂಸ್ಥೆ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್, ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ (ಡಿಸಿಜಿಐ) ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ಷರತ್ತುಗಳೊಂದಿಗೆ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.

ಲಸಿಕೆಗೆ ಬಳಸಲಾದ ಮ್ಯಾಟ್ರಿಕ್ಸ್ ಅಂಶದ ಬಗ್ಗೆ ವಿವರ ನೀಡುವಂತೆ ಉನ್ನತ ಔಷಧ ನಿಯಂತ್ರಕವು ಸೀರಮ್ ಸಂಸ್ಥೆಗೆ ತಿಳಿಸಿದೆ.

ಭಾರತದ ಮತ್ತೊಂದು ಲಸಿಕೆ ಕೋವೊವ್ಯಾಕ್ಸ್ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಈಚೆಗೆ ಅನುಮೋದನೆ ನೀಡಿತ್ತು. ನೋವಾವ್ಯಾಕ್ಸ್ ಮೂಲಕ ನೀಡಲಾದ ಪರವಾನಗಿ ಅಡಿಯಲ್ಲಿ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಸಂಸ್ಥೆ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. 

ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಎರಡನೇ ಲಸಿಕೆ ಕೋವೊವ್ಯಾಕ್ಸ್ ಆಗಿದೆ. ಅಮೆರಿಕದ ಆಸ್ಟ್ರಾಜೆನೆಕಾ ಸಂಸ್ಥೆ ಸಹಯೋಗದಿಂದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಈ ಹಿಂದೆ ಕೊವಿಶೀಲ್ಡ್ ಲಸಿಕೆ ತಯಾರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ