ಪುರುಷಗಿಂತ ಮಹಿಳೆಯರ ಹೃದಯ ಬಡಿತ ವೇಗವಾಗಿರುತ್ತದೆ ; ಸಂಶೋಧನೆ

ಶನಿವಾರ, 3 ಜೂನ್ 2023 (12:59 IST)
ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸ್ವಲ್ಪ ವೇಗವಾಗಿ ಹೃದಯ ಬಡಿತವನ್ನು ಹೊಂದಿರುತ್ತಾರೆ. ಗರ್ಭಾವಸ್ಥೆ ಮತ್ತು ಋತುಬಂಧ ಎರಡೂ ಹೃದಯದ ಕಾರ್ಯಚಟುವಟಿಕೆಯಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದು ತಿಳಿದುಬಂದಿದೆ.
 
ವಯಸ್ಕ ಮಹಿಳೆಯರಿಗೆ ಸರಾಸರಿ ಹೃದಯ ಬಡಿತವು ಪ್ರತಿ ನಿಮಿಷಕ್ಕೆ 78 ರಿಂದ 82 ಬಡಿತ ಇರುತ್ತದೆ, ಆದರೂ ಸಾಮಾನ್ಯ ವ್ಯಾಪ್ತಿಯು ನಿಮಿಷಕ್ಕೆ 60 ರಿಂದ 100 ಬೀಟ್ಸ್ ನಡುವೆ ಇರುತ್ತದೆ. ಹಾರ್ಮೋನುಗಳು, ವ್ಯಾಯಾಮ ಮತ್ತು ಜೀವನಶೈಲಿಯ ಆಯ್ಕೆಗಳಂತಹ ಬಹು ಅಂಶಗಳು ನಿಮ್ಮ ಹೃದಯ ಬಡಿತದ ಮೇಲೆ ಪರಿಣಾಮ ಬೀರಬಹುದು ಎಂದು ಸಂಶೋಧನೆ ತಿಳಿಸಿದೆ.

ಆದರೆ ಈ ಸಂಶೋಧನೆಗೆ ಸಂಬಂಧಿಸಿದಂತೆ ನೋಯ್ಡಾದ ಶಾರದಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಸುಭೇಂದು ಮೊಹಾಂತಿ ಈ ಹೇಳಿಕೆಯನ್ನು ನಿರಾಕರಿಸಿದರು, ಹೃದಯ ಬಡಿತವು ಲಿಂಗಕ್ಕೆ ಸಂಬಂಧಿಸಿಲ್ಲ. ಹೃದಯ ಬಡಿತವು ವ್ಯಕ್ತಿಯ ದೈಹಿಕ ಚಟುವಟಿಕೆಗಳಿಂದ ಬದಲಾವಣೆ ಉಂಟಾಗುತ್ತದೆ ಎಂದು ಡಾ. ಮೊಹಾಂತಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.

ಆದರೆ ಮಣಿಪಾಲ್ ಆಸ್ಪತ್ರೆಯ ಸಲಹೆಗಾರ ಡಾ.ರಂಜನ್ ಶೆಟ್ಟಿಯವರ ಪ್ರಕಾರ ಪುರುಷರಿಗೆ ಹೋಲಿಸಿದರೆ ಮಹಿಳೆಯ ಹೃದಯ ಬಡಿತ ಸ್ವಲ್ಪ ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ. ಪುರುಷ ಮತ್ತು ಮಹಿಳೆಯರ ಹೃದಯಬಡಿತದಲ್ಲಿ 10 ಬಡಿತಗಳ ವರೆಗೆ ವ್ಯಾತಾಸವಿರಬಹುದು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ