ಮತ್ತೆ ಕರಾವಳಿ, ಮುಂಬೈನಲ್ಲಿ ಮಳೆಯ ಆರ್ಭಟ

ಭಾನುವಾರ, 8 ಜುಲೈ 2018 (08:26 IST)
ಬೆಂಗಳೂರು: ಮತ್ತೆ ಮಳೆರಾಯನ ಅಬ್ಬರ ಜೋರಾಗಿದೆ. ನಿನ್ನೆ ಇಡೀ ದಿನ ಕರಾವಳಿ ಮತ್ತು ಮುಂಬೈ ನಗರಿಯಲ್ಲಿ ಧಾರಾಕಾರ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

ದ.ಕ. ಜಿಲ್ಲೆಯಲ್ಲಿ ಮತ್ತೆ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನಿನ್ನೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಈ ಬಾರಿ ಕರಾವಳಿಯಲ್ಲಿ ದಾಖಲೆಯ ಮಳೆಯಾಗಿದೆ.

ಇನ್ನು ವಾಣಿಜ್ಯ ನಗರಿ ಮುಂಬೈನಲ್ಲೂ ಭಾರೀ ಮಳೆಯಾಗಿದೆ. ಮೊನ್ನೆಯಷ್ಟೇ ಭಾರೀ ಮಳೆಯಿಂದಾಗಿ ರೈಲ್ವೇ ಮೇಲ್ಸೇತುವೆ ಕುಸಿದು ಬಿದ್ದು ಹಲವರು ಗಾಯಗೊಂಡಿದ್ದರು. ಇದೀಗ ಇನ್ನೂ ಐದು ದಿನಗಳ ಕಾಲ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ