ಮಳೆ ನೀರಿಗೆ ಕುಸಿದ ಬಾವಿ: ಆದ ಹಾನಿ ಎಷ್ಟು ಗೊತ್ತಾ?

ಶನಿವಾರ, 7 ಜುಲೈ 2018 (17:37 IST)
ಭಾರಿ ಮಳೆಯಿಂದ ಗೋಡೆ ಕುಸಿತ, ಮನೆ ಕುಸಿತ, ಕಂಪೌಂಡ್ ಕುಸಿತವಾಗಿದೆ ಎಂದು ನಾವು ನಿವೆಲ್ಲ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಬಾವಿ ಕುಸಿತವಾಗಿದೆ ಎಂದರೆ ನಂಬಲೇಬೇಕು.

ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಚ್ಚಿಲ ಬಡಾ ಗ್ರಾಮದ ಪೊಲ್ಯ ಎಂಬಲ್ಲಿ ಮನೆ ಸಮಿಪದ ಬಾವಿಯೊಂದು ಕುಸಿದಿದೆ. ಹೀಗಾಗಿ ಮನೆ ಕೂಡಾ ಅಪಾಯದ ಸ್ಥಿತಿಯಲ್ಲಿದೆ. ಸಫಿಯಾ ಎಂಬವರ ಮನೆ ಸಮೀಪದ ಬಾವಿ ಇದಾಗಿದೆ. ಇತ್ತೀಚೆಗೆ ಬಾವಿಯ ಒಳ ಅರ್ಧ ಭಾಗ ಕುಸಿದು ಆತಂಕ ಸೃಷ್ಟಿಸಿತ್ತು.

ಇದೀಗ ನಿನ್ನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಾವಿ ಸಂಪೂರ್ಣ ಕುಸಿದಿದೆ. ಬಾವಿ ಕುಸಿದಿರುವುದರಿಂದ ಸುಮಾರು 2 ರಿಂದ 3 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ