ಪೀಠಾಧಿಪತಿ ಬದಲಾವಣೆಗೆ ಹೆಚ್ಚಿದ ಒತ್ತಡ

ಶುಕ್ರವಾರ, 30 ಸೆಪ್ಟಂಬರ್ 2022 (06:21 IST)
ಚಿತ್ರದುರ್ಗ : ಪೋಕ್ಸೋ ಪ್ರಕರಣದಡಿ ಮುರುಘಾ ಶ್ರೀಗಳು ನ್ಯಾಯಾಂಗ ಬಂಧನದಲ್ಲಿರುವುದರಿಂದ ಮುರುಘಾ ಮಠದ ದೈನಂದಿನ ಧಾರ್ಮಿಕ ಕಾರ್ಯಗಳನ್ನು ಹಾಗೂ ಆಡಳಿತಾತ್ಮಕ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಲು ನೂತನ ಸ್ವಾಮೀಜಿ ನೇಮಕ ಮಾಡುವ ಅಗತ್ಯವಿದೆ.

ಮುರುಘಾ ಶ್ರೀಗಳು ಜೈಲಿನಲ್ಲಿರುವ ಹಿನ್ನೆಲೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಚಿತ್ರದುರ್ಗದಲ್ಲಿ ಸಭೆ ಸೇರಿ ಮಠಕ್ಕೆ ನೂತನ ಪೀಠಾಧಿಪತಿಯನ್ನು ನೇಮಿಸಬೇಕು. ಅಲ್ಲದೇ ಕಳಂಕಿತ ಸ್ವಾಮೀಜಿ ಬೆನ್ನಿಗೆ ನಿಂತಿರುವ ಪಟ್ಟಭದ್ರರನ್ನು ಮಠದಿಂದ ಹೊರಹಾಕಬೇಕು.

ಇದಕ್ಕೆ ಅಗತ್ಯಬಿದ್ದರೇ ಕಾನೂನು ಹೋರಾಟ ಕೂಡ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಇದಕ್ಕೆ ಸ್ವಾಮೀಜಿ ಮತ್ತು ಎಸ್ಕೆ ಬಸವರಾಜನ್ ಬೆಂಬಲಿಗರು ತಗಾದೆ ತೆಗೆದು ಗದ್ದಲ ಎಬ್ಬಿಸಲು ನೋಡಿದ್ದಾರೆ.

ಸಮರ್ಪಕ ಮಾಹಿತಿಯುಳ್ಳ ಮೆಮೋ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ