ಇಂದಿನಿಂದ ಮದ್ಯ ಕೊರತೆ ಸಾಧ್ಯತೆ

ಸೋಮವಾರ, 1 ಆಗಸ್ಟ್ 2022 (09:20 IST)
ನವದೆಹಲಿ : ದೆಹಲಿಯ ಬಹುತೇಕ ಖಾಸಗಿ ಮದ್ಯದಂಗಡಿಗಳ ಪರವಾನಗಿ ಅವಧಿಯು ಮುಕ್ತಾಯಗೊಳ್ಳಲಿದ್ದು,

ಅವುಗಳನ್ನು ಬಂದ್ ಮಾಡಲು ನಿರ್ಧರಿಸಿರುವುದರಿಂದ ರಾಷ್ಟ್ರರಾಜಧಾನಿಯಲ್ಲಿ ಮದ್ಯದ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ದೆಹಲಿ ಸರ್ಕಾರದ ಮೂಲಗಳು ತಿಳಿಸಿರುವ ಪ್ರಕಾರ, ಮದ್ಯದ ಅಂಗಡಿಗಳು ಆಗಸ್ಟ್ ಅಂತ್ಯದ ವರೆಗೆ ತೆರೆದಿರಲು ಅವಕಾಶ ನೀಡುತ್ತವೆ ಎಂದು ಹೇಳಲಾಗಿದೆ. ಹಳೆಯ ಅಬಕಾರಿ ನೀತಿಯ ಆಡಳಿತಕ್ಕೆ ಮರಳಲು ನಿರ್ಧರಿಸಿರುವ ಸರ್ಕಾರ ತನ್ನದೇ ಏಜೆನ್ಸಿಗಳ ಮೂಲಕ ಮಳಿಗೆಗಳನ್ನು ನಡೆಸಲು ನಿರ್ಧರಿಸಿದೆ.

ಈ ಪ್ರಕ್ರಿಯೆಯಿಂದಾಗಿ ಹೊಸ ಅಂಗಡಿಗಳನ್ನು ತೆರೆಯಲು ಸ್ವಲ್ಪ ಕಾಲ ತೆಗೆದುಕೊಳ್ಳುತ್ತದೆ. ಹಾಗಾಗಿ ಮದ್ಯದ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 

ದೆಹಲಿ ಸರ್ಕಾರ ಹಳೆಯ ಅಬಕಾರಿ ನೀತಿಗೆ ಮರಳುವ ಮೂಲಕ 6 ತಿಂಗಳ ಕಾಲ ಸ್ವತಃ ಮಳಿಗೆಗಳನ್ನು ನಡೆಸುವುದಾಗಿ ಶನಿವಾರ ಹೇಳಿತ್ತು. 2021-22ರ ಅಬಕಾರಿ ನೀತಿ ಅಡಿಯಲ್ಲಿ ದೆಹಲಿಯಲ್ಲಿ 468 ಚಿಲ್ಲರೆ ಮದ್ಯದಂಗಡಿಗಳು ನಡೆಯುತ್ತಿದ್ದು, ಜುಲೈ 31ರ ನಂತರ ಪರವಾನಗಿ ಅವಧಿ ಮುಕ್ತಾಯವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ