ಬೆಂಗಳೂರು : ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಾರ್ಟ್ಮೆಂಟ್ ಮತ್ತು ವಸತಿ ನಿಲಯಗಳಿಗೆ ಬಿಬಿಎಂಪಿ ಮಾರ್ಗಸೂಚಿ ಪ್ರಕಟಿಸಿದೆ.
ಇನ್ಮುಂದೆ ಅಪಾರ್ಟ್ಮೆಂಟ್ಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಗರಿಷ್ಠ 50 ಮಂದಿ ಭಾಗಿಯಾಗಬೇಕು ಎಂದು ತಿಳಿಸಿದೆ. ಅಪಾರ್ಟ್ಮೆಂಟ್ನ ಜಿಮ್, ಸ್ವಿಮ್ಮಿಂಗ್, ಮೈದಾನಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.
ಪರಿಶೀಲನೆಗೆ ಮಾರ್ಷಲ್ಗಳು ಬರುತ್ತಾರೆ ಎಂದು ಸ್ಪಷ್ಟಪಡಿಸಿದೆ. 3ಕ್ಕಿಂತ ಹೆಚ್ಚು ಕೇಸ್ ಪತ್ತೆಯಾದ್ರೆ ಇಡೀ ಮಹಡಿ ಸೀಲ್ಡೌನ್ ಆಗಲಿದೆ. 10ಕ್ಕಿಂತ ಹೆಚ್ಚು ಕೇಸ್ ಬಂದ್ರೆ ಅಪಾರ್ಟ್ಮೆಂಟ್ ಲಾಕ್ ಆಗಲಿದ್ದು, ಟೆಂಪರೇಚರ್ ಟೆಸ್ಟ್, ಸ್ಯಾನಿಟೈಸೇಷನ್ ಕಡ್ಡಾಯಗೊಳಿಸಲಾಗಿದೆ.
ರಾಜ್ಯದಲ್ಲಿ ಕೊರೋನಾ ರಣಾರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪರಿಣಾಮ ಇಂದು ರಾಜ್ಯದಲ್ಲಿ ಹೊಸ ಕೇಸ್ಗಳ ಸಂಖ್ಯೆ 25 ಸಾವಿರ ದಾಟಿದೆ. ಇಂದು 25,005 ಹೊಸ ಕೇಸ್ ಬಂದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ ಒಂದು ಲಕ್ಷ ದಾಟಿದೆ.