ಭಾರತದಲ್ಲಿ ಒಮಿಕ್ರಾನ್ ಕೇಸ್ 10 ಲಕ್ಷಕ್ಕೇರುವ ಸಾಧ್ಯತೆ!

ಶನಿವಾರ, 25 ಡಿಸೆಂಬರ್ 2021 (07:06 IST)
ಭಾರತದಲ್ಲಿ ಒಮಿಕ್ರಾನ್ ಕೇಸ್ 10 ಲಕ್ಷಕ್ಕೇರುವ ಸಾಧ್ಯತೆ ಇದೆ. ಇದನ್ನು ನಿಯಂತ್ರಿಸಲು ನಮಗೆ ತಿಂಗಳ ಸಮಯವೂ ಇಲ್ಲ ಎಂದು ಕೇರಳದ ಕೊವಿಡ್ ತಜ್ಞರ ಸಮಿತಿ ಸದಸ್ಯ ಡಾ.ಅನೀಶ್ ಹೇಳಿದ್ದಾರೆ.
 
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘‘ತಿಂಗಳ ಅವಧಿಯಲ್ಲೇ ಒಮಿಕ್ರಾನ್ ನಿಯಂತ್ರಣಕ್ಕೆ ಕ್ರಮ ಅಗತ್ಯ. ಅದಕ್ಕಿಂತ ಹೆಚ್ಚು ಸಮಯ ನಮ್ಮ ಬಳಿಯಿಲ್ಲ’’ ಎಂದು ನುಡಿದಿದ್ದಾರೆ.

ವಿಶ್ವದಲ್ಲಿ ದಿನೇದಿನೆ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದೇ ಸಂಖ್ಯೆ ಆಧರಿಸಿ ನೋಡುವುದಾದರೆ ನಮ್ಮಲ್ಲೂ ರೂಪಾಂತರಿ ಒಮಿಕ್ರಾನ್ ಸೋಂಕು ಹೆಚ್ಚಾಗಲಿದೆ. 2-3 ವಾರದಲ್ಲಿ ಒಮಿಕ್ರಾನ್ ಸಂಖ್ಯೆ 1000ಕ್ಕೇರುವ ಸಾಧ್ಯತೆ ಇದ್ದು,

2 ತಿಂಗಳಲ್ಲಿ ಭಾರತದಲ್ಲಿ 10 ಲಕ್ಷ ಒಮಿಕ್ರಾನ್ ಕೇಸ್ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಈ ಕಾರಣದಿಂದಲೇ ಮುನ್ನೆಚ್ಚರಿಕೆ ಕೈಗೊಳ್ಳಲು ತಿಂಗಳಿಗಿಂತ ಕಡಿಮೆ ಅವಧಿಯಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ