ಓಮಿಕ್ರಾನ್ ವೇರಿಯಂಟ್ ಬಂದರೆ ಒಳ್ಳೆಯದೇ: ಅಧ್ಯಯನ!

ಶುಕ್ರವಾರ, 21 ಜನವರಿ 2022 (06:14 IST)
ನವದೆಹಲಿ : ಓಮಿಕ್ರಾನ್ ವೇರಿಯಂಟ್ ಒಳ್ಳೆಯದೇ ಎಂದು ದಕ್ಷಿಣ ಆಫ್ರಿಕಾದಲ್ಲಿ ನಡೆದ ಒಂದು ಅಧ್ಯಯನ ತಿಳಿಸಿದೆ.

ಡಬಲ್ ಡೋಸ್ ಪಡೆದವರಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡರೇ ಹೆಚ್ಚು ತೊಂದರೆ ಆಗುವುದಿಲ್ಲ ಎಂದು ವರದಿ ಹೊರಬಿದ್ದಿದೆ.

ಓಮಿಕ್ರಾನ್ ಸೋಂಕಿತರಾದವರಲ್ಲಿ ಸೋಂಕು ನಿರೋಧಕ ಶಕ್ತಿ ಉತ್ಪತ್ತಿ ಆಗುತ್ತದೆ. ಇದು ಡೆಲ್ಟಾ ಸೇರಿ ಇತರೆ ವೇರಿಯಂಟ್ಗಳು ದಾಳಿ ಮಾಡದಂತೆ ತಡೆಯುತ್ತದೆ ಎಂದು ವರದಿ ಸ್ಪಷ್ಟಪಡಿಸಿದೆ. ಈ ನಡುವೆ ಓಮಿಕ್ರಾನ್ ಆರ್ಭಟಕ್ಕೆ ತತ್ತರಿಸಿದ್ದ ಬ್ರಿಟನ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.

ಬ್ರಿಟನ್ನಲ್ಲಿ ಓಮಿಕ್ರಾನ್ ಪರಾಕಾಷ್ಟೆಯ ಹಂತ ತಲುಪಿಯಾಗಿದೆ. ಹೀಗಾಗಿಯೇ ಮಾಸ್ಕ್, ವರ್ಕ್ ಫ್ರಮ್  ಹೋಂ, ಸಭೆ ಸಮಾರಂಭಗಳಿಗೆ ವ್ಯಾಕ್ಸಿನ್ ಸರ್ಟಿಫಿಕೇಟ್ ಕಡ್ಡಾಯದಂತಹ ನಿಯಮಗಳನ್ನು ಸಡಿಲಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಬೊರೀಸ್ ಜಾನ್ಸನ್ ಹೇಳಿದ್ದಾರೆ. ಜಗತ್ತಿನಲ್ಲಿ ನಿನ್ನೆ ದಾಖಲೆಯ 35 ಲಕ್ಷ ಕೇಸ್ ಬಂದಿದೆ. ಅಮೆರಿಕಾ 7.10 ಲಕ್ಷ, ಫ್ರಾನ್ಸ್ನಲ್ಲಿ 4.36 ಲಕ್ಷ ಕೇಸ್ ಬಂದಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ