ಇಂದಿನಿಂದ ಮನೆ ನಿರ್ಮಾಣ ಉತ್ಪನ್ನಗಳ ಬೆಲೆ ಏರಿಕೆ!

ಮಂಗಳವಾರ, 1 ಆಗಸ್ಟ್ 2023 (09:18 IST)
ಬೆಂಗಳೂರು : ಕೋವಿಡ್ ಮುನ್ನ ಕೊಂಚ ಕೈಗೆಟುಕುವಂತಿದ್ದ ಅಗತ್ಯ ವಸ್ತುಗಳು ತದನಂತರ ಗಣನೀಯವಾಗಿ ಏರಿಕೆ ಕಾಣುತ್ತಲೆ ಇದೆ. ಗೃಹ ಹಾಗೂ ಇತರೆ ಕಟ್ಟಡ ನಿರ್ಮಾಣಕ್ಕೆಅಗತ್ಯವಿರುವ ಕಚ್ಚಾವಸ್ತುಗಳ ಬೆಲೆಯೂಏರುತ್ತಲೆ ಇದೆ. ಇದರಿಂದ ಮನೆ ಕಟ್ಟುವವರನ್ನು ಕಂಗಾಲಾಗುವಂತೆ ಮಾಡಿದೆ. 
 
ಹೌದು…. ದಿನಸಿ, ಹಾಲು-ತರಕಾರಿ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹೊಸ ಮನೆ ಕಟ್ಟುವವರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಇಂದಿನಿಂದ ಅಂದರೆ (ಆಗಸ್ಟ್ 01) ಮರಳು, ಜಲ್ಲಿ, ಗ್ರಾನೈಟ್, ಕಬ್ಬಿಣ ಬೆಲೆ ಮತ್ತಷ್ಟು ಏರಿಕೆಯಾಗಿದೆ.  ಇದರೊಂದಿಗೆ  ಹೊಸ ಮನೆ ಕಟ್ಟೋ ಕನಸು ದುಬಾರಿಯಾಗುತ್ತಿದೆ.

ಮರಳು, ಎಂ-ಸ್ಯಾಂಡ್, ಜಲ್ಲಿಕಲ್ಲು, ಗ್ರಾನೈಟ್ ಬಂಡೆ, ಕಬ್ಬಿಣ ಸೇರಿದಂತೆ ಮನೆ ನಿರ್ಮಾಣದ ಇನ್ನಿತರ ವಸ್ತುಗಳ ಪರಿಷ್ಕೃತ ಇಂದಿನಿಂದ ದರ ಜಾರಿಗೆ ಬಂದಿದೆ. ಜೊತೆಗೆ ಮನೆ ನಿರ್ಮಾಣದ ವಸ್ತುಗಳ ಸಾಗಾಣಿಕೆ ದರ ಕೂಡ ದುಬಾರಿಯಾಗಿದೆ. ಇದರೊಂದಿಗೆ ಮನೆ, ಕಟ್ಟಡ ನಿರ್ಮಾಣಕ್ಕೆ ಮುಂದಾದವರಿಗೆ ಮತ್ತಷ್ಟು ಹೆಚ್ಚುವರಿ ದರ ಏರಿಕೆ ಬಿಸಿ ತಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ