ನಮ್ಮದು ಮುಸ್ಲಿಮರ ಪಕ್ಷ ಎಂದರೇ? ರಾಹುಲ್ ಗಾಂಧಿ ಸ್ಪಷ್ಟನೆ ಕೊಟ್ಟಿದ್ದು ಹೀಗೆ!

ಬುಧವಾರ, 18 ಜುಲೈ 2018 (09:36 IST)
ನವದೆಹಲಿ: ನಮ್ಮದು ಮುಸ್ಲಿಮರ ಪಕ್ಷ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ್ದಾರೆನ್ನಲಾದ ಹೇಳಿಕೆ ಇದೀಗ ವಿಪಕ್ಷ ಬಿಜೆಪಿ ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ರಾಹುಲ್ ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.
 

ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿರುವ ರಾಹುಲ್, ನಮಗೆ ಧರ್ಮ, ಜಾತಿ ಎಲ್ಲವೂ ಗಣನೆಗೆ ಬರುವುದಿಲ್ಲ. ದಮನಿತರ, ಹಿಂದುಳಿದವರ ಪರ ನಾನು ನನ್ನ ಪಕ್ಷ ನಿಲ್ಲುತ್ತದೆ ಎಂದಿದ್ದಾರೆ.

‘ನನಗೆ ಇನ್ನೊಬ್ಬರ ನೋವಿನಲ್ಲಿ ಭಾಗಿಯಾಗುವುದು ಇಷ್ಟ. ನಾನು ಎಲ್ಲಾ ಮಾನವ ಜೀವಿಗಳನ್ನು ಇಷ್ಟಪಡುತ್ತೇನೆ. ನಾನು ಕಾಂಗ್ರೆಸ್ಸಿಗ’ ಎಂದು ರಾಹುಲ್ ಸಮರ್ಥಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುಸ್ಲಿಮ್ ನಾಯಕರನ್ನು ಭೇಟಿಯಾಗಿದ್ದ ರಾಹುಲ್ ನಮ್ಮ ಪಕ್ಷ ಮುಸ್ಲಿಮರ ಪರ ಎಂದಿದ್ದರು ಎಂದು ಉರ್ದು ಪತ್ರಿಕೆಯೊಂದು ವರದಿ ಮಾಡಿತ್ತು.

ಈ ವರದಿ ಭಾರೀ ಸುದ್ದಿಯಾಗಿ ವಿಪಕ್ಷಗಳಿಗೆ ಟೀಕಾಸ್ತ್ರವಾಯಿತು. ಇದರ ಬಗ್ಗೆ ಕಾಂಗ್ರೆಸ್ ರಾಹುಲ್ ಹೀಗೆ ಹೇಳಿಲ್ಲ ಎಂದು ನಿರಾಕರಿಸಿತ್ತು. ಹಾಗಿದ್ದರೂ ವಿಪಕ್ಷಗಳು ಟೀಕೆ ಮುಂದುವರಿಸಿದ್ದಕ್ಕೆ ರಾಹುಲ್ ಈ ರೀತಿ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ