ಅಸ್ಸಾಂ ನಲ್ಲಿ ಮಹಿಳೆಯೊಬ್ಬಳ ಗುಪ್ತಾಂಗಕ್ಕೆ ಖಾರದಪುಡಿ ಹಾಕಿದ್ದಾದರೂ ಯಾಕೆ?
ಸೋಮವಾರ, 24 ಸೆಪ್ಟಂಬರ್ 2018 (07:08 IST)
ಗುವಾಹಟಿ : ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಮಹಿಳೆಯೊಬ್ಬಳ ಗುಪ್ತಾಂಗಕ್ಕೆ ಮಹಿಳೆಯರೆಲ್ಲಾ ಸೇರಿ ಖಾರದಪುಡಿ ಹಾಕಿ ಕ್ರೂರವಾಗಿ ಶಿಕ್ಷೆ ನೀಡಿದ ಘಟನೆ ಅಸ್ಸಾಂನ ಕರಿಂಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಅಸ್ಸಾಂ-ಮಿಜೋರಾಂ ಗಡಿಭಾಗದಲ್ಲಿ ಮಹಿಳೆಯೊಬ್ಬಳು ಅಕ್ರವಾಗಿ ಮದ್ಯ ಮಾರಾಟ ಮಾಡುತ್ತಿದ್ದಳು. ಜೊತೆಗೆ ಆಕೆಯು ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಳು. ಹೀಗಾಗಿ ಕೆಲ ಸ್ಥಳೀಯ ಮಹಿಳೆಯರು ಆಕೆಯ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ಮಾಡಿ ಆಕೆಯ ಗುಪ್ತಾಂಗಕ್ಕೆ ಖಾರದಪುಡಿ ಹಾಕಿದ್ದಾರೆ.
ಸೆಪ್ಟೆಂಬರ್ 10ರಂದು ಘಟನೆ ನಡೆದಿದ್ದು, ಶುಕ್ರವಾರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಜನರನ್ನು ಬಂಧಿಸಿದ್ದಾರೆ.
ಹಲ್ಲೆ ಮಾಡಿದ ಮಹಿಳೆಯರನ್ನು ಹೊರತುಪಡಿಸಿ, ಕೃತ್ಯವನ್ನು ಸೆರೆ ಹಿಡಿದವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.