ಭಾರತಕ್ಕೆ ಕಾರ್ಬ್ವ್ಯಾಕ್ಸ್ ಪೂರೈಕೆ
ಕೆಲವು ಷರತ್ತುಗಳನ್ನು ವಿಧಿಸಿ 12ರಿಂದ 18 ವರ್ಷ ವಯಸ್ಸಿನವರಿಗೆ ಕಾರ್ಬ್ವ್ಯಾಕ್ಸ್ ಕೊವಿಡ್ ಲಸಿಕೆಯನ್ನು ಶಿಫಾರಸು ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರಕ್ಕೆ ಮೊದಲ ಹಂತದಲ್ಲಿ ಇಂದೇ ಕಾರ್ಬ್ವ್ಯಾಕ್ಸ್ ಲಸಿಕೆಗಳು ಪೂರೈಕೆಯಾಗುವ ಸಾಧ್ಯತೆಯಿದೆ.
ಕಾರ್ಬ್ವ್ಯಾಕ್ಸ್ ಲಸಿಕೆಯ 1 ಡೋಸ್ಗೆ ತೆರಿಗೆಗಳನ್ನು ಹೊರತುಪಡಿಸಿ 145 ರೂ. ತಗುಲುತ್ತದೆ. ಬಯಾಲಾಜಿಕಲ್ ಇ ಕಂಪನಿ ಈಗಾಗಲೇ 250 ಮಿಲಿಯನ್ ಕಾರ್ಬ್ವ್ಯಾಕ್ಸ್ ಲಸಿಕೆಗಳನ್ನು ಉತ್ಪಾದನೆ ಮಾಡಿದೆ.
ಉಳಿದ ಡೋಸ್‌ಗಳನ್ನು ಕೆಲವೇ ವಾರಗಳಲ್ಲಿ ಉತ್ಪಾದಿಸುವ ಗುರಿಯನ್ನು ಹೊಂದಿದೆ.