ಧಿಡೀರ್ ಕುಸಿತ ಕಂಡ ಟೊಮೊಟೋ !

ಶುಕ್ರವಾರ, 3 ಡಿಸೆಂಬರ್ 2021 (06:52 IST)
ನಿರಂತರವಾಗಿ ಮಳೆ ಸುರಿಯುತ್ತಿದ್ದ ಸಮಯದಲ್ಲಿ ದಿಢೀರನೇ ಕೆಜಿ ಒಂದಕ್ಕೆ 100 ರೂಪಾಯಿ ತಲುಪಿದ್ದ ಟೊಮೇಟೊ ಬೆಲೆ ಈ ವಾರ ಕುಸಿದಿದೆ.
ನಗರದ ಎಂ.ಜಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಟೊಮೇಟೊ ರೂ.60 ಕ್ಕೆ ಸಿಗುತ್ತಿದೆ, ತಳ್ಳುವ ಗಾಡಿಗಳಲ್ಲಿ 50ರಿಂದ 55 ರವರೆಗೆ ಬೆಲೆಯಿದೆ. ಮಳೆ ಕಡಿಮೆಯಾಗಿರುವುದರಿಂದ ಟೊಮೇಟೊ ಬೆಳೆಯೂ ಕಡಿಮೆಯಾಗಿದೆ.
ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ವಾರ ಧಾರಣೆ ಇನ್ನಷ್ಟು ಕುಸಿಯಲಿದೆ ಎನ್ನುತ್ತಾರೆ ವ್ಯಾಪಾರಿಗಳು,. ಮಳೆ ನಿಲ್ಲುವ ಲಕ್ಷಣ ಕಾಣದಿದ್ದರೂ, ನಗರದಲ್ಲಿ ಚಳಿ ಆರಂಭವಾಗಿದೆ. ಮಾರುಕಟ್ಟೆಗೆ ಸೊನೆ ಅವರೆಕಾಯಿ, ತೊಗರಿ ಕಾಯಿ ಬರುವುದಕ್ಕೆ ಆರಂಭವಾಗಿದ್ದು, ಗ್ರಾಹಕರಿಂದ ಬೇಡಿಕೆ ಸೃಷ್ಟಿಯಾಗಿದೆ.
ಅವರೆಕಾಯಿ ಕೆಜಿಗೆ ರೂ.40 ರಿಂದ 50ರ ವರೆಗೆ ಬೆಲೆ ಇದೆ, ತೊಗರಿಕಾಯಿ ಒಂದು ಕೆಜಿಗೆ ರೂ.60ಕ್ಕೆ ಮಾರಾಟವಾಗುತ್ತಿದೆ. ಸೊನೆ ಅವರೆಗೆ ಬೇಡಿಕೆ ಹೆಚ್ಚು: ತೊಗರಿ ಕಾಯಿ ಸೀಸನ್ ಈಗಷ್ಟೇ ಆರಂಭವಾ ಗಿದೆ. ಹಾಗಾಗಿ ರೂ.60 ಇದೆ.
ಮಾರು ಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾದಾಗ ಬೆಲೆ ಇನ್ನಷ್ಟು ಇಳಿಯಲಿದೆ ಎಂದು ಎಂ.ಜಿ.ಮಾರುಕಟ್ಟೆ ವ್ಯಾಪಾರಿ ತಂಗವೇಲು ತಿಳಿಸಿದರು. ಉಳಿದ ತರಕಾರಿಗಳ ಪೈಕಿ ದಪ್ಪ ಮೆಣಸಿನಕಾಯಿ, ಗೆಡ್ಡೆಕೋಸು ದುಬಾರಿಯಾಗಿದೆ. ಗೆಡ್ಡೆಕೋಸಿಗೆ ಕೆಜಿ.ಗೆ ರೂ.80 ಇದೆ, ಕಳೆದ ವಾರ 120 ಇದ್ದ ದಪ್ಪ ಮೆಣಸಿನ ಕಾಯಿ ಬೆಲೆ ಈ ವಾರ 140 ಕ್ಕೆ ಏರಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ