ನಿಯಮ ಉಲ್ಲಂಘನೆ ಮಾಡಿದ್ರೆ ಕಠಿಣ ಕ್ರಮ

ಶನಿವಾರ, 23 ಏಪ್ರಿಲ್ 2022 (10:31 IST)
ಬೆಂಗಳೂರು : ಹೈಕೋರ್ಟ್ ಆದೇಶ ಪಾಲನೆ ಮಾಡುವಂತೆ ಮಸೀದಿ, ಮಂದಿರಗಳಿಗೆ, ಚರ್ಚ್, ಪಬ್, ಕ್ಲಬ್ಗಳಿಗೆ ನೋಟಿಸ್ ಕೊಡಲಾಗಿದೆ.
 
ನೋಟಿಸ್ ನೀಡಿಯೂ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ಮೇಲೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಪೊಲೀಸ್ ಮಹಾನಿರ್ದೇಕ ಪ್ರವೀಣ್ ಸೂದ್ ನೀಡಿದ್ದಾರೆ.

ದೇವಸ್ಥಾನ ಮಂದಿರ ಮಸೀದಿಗಳಲ್ಲಿ ಚರ್ಚ್, ಪಬ್, ಕ್ಲಬ್ ಸ್ಟಾಂಡರ್ಡ್ ಸೌಂಡ್ ಬಳಕೆ ಮಾಡಬೇಕು ಹೈಕೋರ್ಟ್ ಆದೇಶದಲ್ಲಿ ಸೂಚಿಸಿರುವ 55 ಡಿಸೆಬಲ್ ಶಬ್ಧವನ್ನು ಮಾತ್ರ ಬಳಸಬೇಕು.

ನಿಯಮ ಮೀರಿ ಶಬ್ಧದ ಬಳಕೆ ಮಾಡಿದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರಿಗಿಸುವ ಎಚ್ಚರಿಕೆ ನೀಡಿದ್ದಾರೆ. 

ಸೌಂಡ್ ಸ್ಪೀಕರ್ ಬಗ್ಗೆ ಎಲ್ಲಾ ಸಮುದಾಯವರ ಸಭೆ ಮಾಡಿ ಮನವರಿಕೆ ಮಾಡಲಾಗಿದೆ. ಹಿಂದೂ ಮುಸ್ಲಿಂ ಕ್ರೈಸ್ತ ಸಮುದಾದ ಮುಖಂಡರೆಲ್ಲರು ಕೂಡ ಕಾನೂನು ಪಾಲನೆ ಮಾಡುವ ಭರವಸೆ ನೀಡಿದ್ದು ಅದರಂತೆ ನಡೆದುಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ