AAP ಮುನ್ನಡೆಗೆ ಕಾರಣಗಳೇನು?

ಗುರುವಾರ, 10 ಮಾರ್ಚ್ 2022 (11:31 IST)
ಪಂಜಾಬ್ನಲ್ಲಿ 1997ರಿಂದ 2001ರವರೆಗೆ ಅಂದರೆ ಸುಮಾರು 24 ವರ್ಷಗಳು ಬಿಜೆಪಿಯೊಂದಿಗೆ ಎಸ್ಡಿಎ ಪಾಲುದಾರಿಕೆಯೊಂದಿಗೆ ಸಾಂಪ್ರದಾಯಿಕವಾಗಿ ಅಧಿಕಾರ ನಡೆಸಿತ್ತು.

2007 ಮತ್ತು 2012 ಗೆದ್ದಿದ್ದ ಕಾಂಗ್ರೆಸ್ಗೆ ಪರ್ಯಾಯವಾಗಿದೆ. ಈ ಬಾರಿ ಪಂಜಾಬ್ನಲ್ಲಿ ಮತದಾರರು ಬದಲಾವಣೆಗೆ ಮತ ಹಾಕಿದ್ದಾರೆ. ಎರಡು ದೊಡ್ಡ ಪಕ್ಷಗಳ 70 ವರ್ಷಗಳ ಆಡಳಿತವನ್ನು ಮತದಾರರು ನೋಡಿದ್ದಾರೆ. ಹೀಗಾಗಿ ಬೇರೆ ಪಕ್ಷಕ್ಕೆ ಅವಕಾಶ ನೀಡುವ ಕಾಲ ಬಂದಿದೆ.

ಈ ಬಾರಿ ನಾವು ಮೂರ್ಖರಾಗುವುದಿಲ್ಲ. ಭಗವಂತ್ ಮಾನ್ ಮತ್ತು ಕೇಜ್ರಿವಾಲ್ಗೆ ಅವಕಾಶ ನೀಡುತ್ತೇವೆ’ ಎಂಬ ಎಎಪಿ ಘೋಷಣೆಯು ರಾಜ್ಯಾದ್ಯಂತ ಪ್ರತಿಧ್ವನಿಸಿತು.

 
ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮಾದರಿಯ ಆಡಳಿತದ ಮೂಲಕ ಪಂಜಾಬ್ ಮತದಾರರ ಗಮನ ಸೆಳೆದರು. ಗುಣಮಟ್ಟದ ಸರ್ಕಾರಿ ಶಿಕ್ಷಣ, ಆರೋಗ್ಯ, ವಿದ್ಯುತ್ ಮತ್ತು ಅಗ್ಗದ ದರದಲ್ಲಿ ನೀರು ಪೂರೈಕೆ ಅವರ ಪ್ರಮುಖ ಸಾಧನೆಗಳಾಗಿವೆ.

ಹಾಲಿ ಮತ್ತು ಹಿಂದಿನ ಸರ್ಕಾರಗಳ ಅಧಿಕಾರ ದಾಹ, ವಿವಿಧ ವಲಯಗಳಲ್ಲಿ ಮಿತಿ ಮೀರಿದ್ದ ದರಗಳು, ಆರೋಗ್ಯ ಮತ್ತು ಶಿಕ್ಷಣದ ಖಾಸಗೀಕರಣ ಜನರಲ್ಲಿ ಬೇಸರ ಮೂಡಿಸಿತ್ತು.

 

ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶ ಬಯಸುವ ಯುವಜನರು ಮತ್ತು ಮಹಿಳಾ ಮತದಾರರಿಂದ ಎಎಪಿ ಬೆಂಬಲ ಪಡೆದಿದೆ. ರಾಜ್ಯದಲ್ಲಿ ಮಿತಿಮೀರಿರುವ ಭ್ರಷ್ಟಾಚಾರವನ್ನು ಬೇರುಸಮೇತ ಕಿತ್ತೊಗೆಯುವ ಕೇಜ್ರಿವಾಲ್ ಅವರ ಭರವಸೆ ಈ ಎರಡು ಸಮುದಾಯಗಳನ್ನು ಆಕರ್ಷಿಸಿತು.

 

ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್ ರೈತರು ಭಾರೀ ಸಂಖ್ಯೆಯಲ್ಲಿ ದೆಹಲಿಯ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಹೋರಾಟಕ್ಕೆ ಎಎಪಿ ಕೂಡ ಸಹಕಾರ ನೀಡಿತ್ತು. ಇಂತಹ ಪ್ರಮುಖ ಬೆಳವಣಿಗೆಗಳು ಪಂಜಾಬ್ ರಾಜಕೀಯ ವಲಯದಲ್ಲಿ ಬದಲಾವಣೆ ಗಾಳಿ ಬೀಸಲು ಕಾರಣವಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ