ಹಳೇ ಲವ್ವರ್ ನ ಸಂಗತಿ ಹೊಸ ಪ್ರೇಮಿ ಬಳಿ ಹೇಳುವ ಮೊದಲು ಇದರ ಬಗ್ಗೆ ಎಚ್ಚರವಹಿಸಿ!

ಸೋಮವಾರ, 17 ಸೆಪ್ಟಂಬರ್ 2018 (09:12 IST)
ಬೆಂಗಳೂರು: ಹೊಸ ಸಂಬಂಧಕ್ಕೆ ಕಾಲಿಡುವಾಗ ಹಳೆಯ ಸಂಗತಿಗಳನ್ನು ಮರೆಯಬೇಕು ಇಲ್ಲಾ ಹೊಸ ಸಂಗಾತಿ ಜತೆಗೆ ಹೇಳಿಕೊಂಡು ಮನಸ್ಸು ಹಗುರವಾಗಿಸಬೇಕು. ಆದರೂ ಹೊಸ ಸಂಗಾತಿ ಜತೆಗೆ ಹಳೇ ಲವ್‍ ವಿಚಾರ ಹೇಳುವ ಮೊದಲು ಇದರ ಬಗ್ಗೆ ಎಚ್ಚರವಹಿಸಿ.

ಪರಿಸ್ಥಿತಿ
ಹಳೇ ಲವ್ವರ್ ನ ಜತೆ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದರೆ ಅದನ್ನು ಹೊಸ ಸಂಗಾತಿ ಜತೆ ಹೇಳಿಕೊಳ್ಳಬೇಕೆಂದರೆ ಪರಿಸ್ಥಿತಿ ಹೇಗಿದೆಯೆಂದು ಮೊದಲು ನೋಡಿಕೊಳ್ಳಿ. ಕೆಟ್ಟ ಪರಿಸ್ಥಿತಿಯಲ್ಲಿ ಹಳೇ ಲವ್ವರ್ ನ ವಿಚಾರ ಪ್ರಸ್ತಾಪಿಸಿ ಹೊಸ ಸಂಬಂಧವನ್ನೂ ಹಾಳು ಮಾಡಿಕೊಳ್ಳಬೇಡಿ.

ಹೊಸ ಸಂಬಂಧ ಹೇಗಿದೆ ನೋಡಿಕೊಳ್ಳಿ
ಹಳೇ ವಿಚಾರವನ್ನು ಕೆದಕುವ ಮೊದಲು ಹೊಸ ಸಂಬಂಧ ಹೇಗಿದೆ ನೋಡಿಕೊಳ್ಳಿ. ಈಗಷ್ಟೇ ಹೊಸ ಸಂಗಾತಿಯನ್ನು ಕಂಡುಕೊಂಡಿದ್ದರೆ ಆರಂಭದಲ್ಲಿಯೇ ಹಳೇ ಸಂಗತಿ ಹೇಳಿ ಹೊಸ ಸಂಗಾತಿಯನ್ನೂ ಕಳೆದುಕೊಳ್ಳಬೇಡಿ. ಮೊದಲು ಹೊಸ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಿ. ನಂತರವೇ ಹಳೇ ವಿಚಾರವನ್ನು ಹೇಳಿಕೊಳ್ಳಿ.

ಸಂಗಾತಿಯ ಸ್ವಭಾವ
ಎಲ್ಲರೂ ಒಂದೇ ಥರಾ ಇರಲ್ಲ. ಕೆಲವರು ತಮ್ಮ ಸಂಗಾತಿಗೆ ತನಗಿಂತ ಮೊದಲು ಬೇರೊಬ್ಬ ಪ್ರೇಮಿ ಇದ್ದ ವಿಚಾರವನ್ನು ಒಪ್ಪಿಕೊಳ್ಳುವ ಧಾರಾಳತನ ಮನಸ್ಸು ಹೊಂದಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಹಳೇ ಪ್ರೇಮಿ ವಿಚಾರವನ್ನು ಹೇಳಿಕೊಳ್ಳದೇ ಇರುವುದು ಒಳ್ಳೆಯದು.

ಹೇಗೆ ಹೇಳಬೇಕು?
ಹಳೇ ವಿಚಾರವನ್ನು ಹೇಳಿಕೊಳ್ಳುವ ಮೊದಲು ಸಂಗಾತಿಯ ಸ್ವಭಾವ, ಮೂಡ್ ನೋಡಿಕೊಂಡು ಎಷ್ಟು ಹೇಳಬೇಕು, ಹೇಗೆ ಹೇಳಬೇಕು ಅಷ್ಟನ್ನೇ ಹೇಳಿ. ಅನಗತ್ಯ ಗೊಂದಲ ಮಾಡಿಕೊಳ್ಳಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ