ಬೆಂಗಳೂರು: ಮದುವೆಯಾದ ಮೊದಲ ಎರಡು ತಿಂಗಳು ದಂಪತಿಗಳಿಗೆ ಮಹತ್ವದ ಸಮಯ. ಈ ಸಮಯದಲ್ಲಿ ಹೇಗೆ ಅಡ್ಜೆಸ್ಟ್ ಆಗುತ್ತೇವೆ ಎನ್ನುವುದರ ಮೇಲೆ ಜೀವನ ನಿಂತಿರುತ್ತದೆ.
ಒಬ್ಬರ ಇಷ್ಟ ಇನ್ನೊಬ್ಬರಿಗೆ ತಿಳಿಯುವುದು
ಮದುವೆಯಾದ ಹೊಸತರಲ್ಲಿ ಒಬ್ಬರ ಇಷ್ಟ ಇನ್ನೊಬ್ಬರಿಗೆ ಏನೆಂದು ತಿಳಿಯುವುದು. ಆಗ ಇಬ್ಬರೂ ಪರಸ್ಪರರ ಇಷ್ಟ-ಕಷ್ಟಗಳನ್ನು ಅರಿತು ಗೌರವಿಸಿ ಮುಂದುವರಿದರೆ ಭವಿಷ್ಯದ ದೃಷ್ಟಿಯಿಂದ ಉತ್ತಮ.
ಮೊದಲ ಜಗಳ
ಮೊದಲ ಬಾರಿ ಜಗಳವಾಡಿದ್ದನ್ನು ಯಾವ ದಂಪತಿಯೂ ಸುಲಭವಾಗಿ ಮರೆಯುವುದಿಲ್ಲ. ಆದರೆ ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಮಾತ್ರವಾಗಿದ್ದರೆ ಒಳ್ಳೆಯದು!
ಹಣಕಾಸಿನ ವಿಚಾರ
ಹಣಕಾಸಿನ ವಿಚಾರದಲ್ಲಿ ಯಾರು ಎಷ್ಟು ಖರ್ಚು ಮಾಡಬೇಕು, ಮನೆಗೆ ಎಷ್ಟು ವೆಚ್ಚ ಮಾಡಬೇಕು ಎಂದೆಲ್ಲಾ ವಿಚಾರಗಳು ಮೊದ ಮೊದಲು ತಲೆ ತಿನ್ನುವುದು ಗ್ಯಾರಂಟಿ. ಅಷ್ಟೇ ಅಲ್ಲ ಸಂಗಾತಿ ಮಾಡುವ ಖರ್ಚು ವೆಚ್ಚದ ಬಗ್ಗೆ ನಿಮಗೆ ಅಸಮಾಧಾನಗಳೂ ಇರಬಹುದು! ಇಂತಹ ವಿಚಾರಗಳನ್ನು ಪರಸ್ಪರ ಕುಳಿತು ಮಾತನಾಡಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು.
ನನ್ನ ಸಮಯ
ಯಾವತ್ತೂ ಗಂಡ, ಅತ್ತೆ-ಮಾವ ಎಂದು ಸಂಸಾರದಲ್ಲಿಯೇ ಮುಳುಗಿ ಹೋಗುತ್ತಿದ್ದೇನಾ ಎಂಬ ಭಯ ಯಾವುದೋ ಕ್ಷಣದಲ್ಲಿ ಕಾಡಬಹುದು. ಅಂತಹ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ. ಮದುವೆಯಾದ ಹೊಸತರಲ್ಲಿ ಹೆಚ್ಚಿನ ಸಮಯ ಸಂಸಾರಕ್ಕೆ ಮೀಸಲಿಡಬೇಕಾಗುತ್ತದೆ. ನಿಧಾನವಾಗಿ ನಿಮ್ಮ ಸಮಯ ಕಂಡುಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.