ವೆಲೆಂಟೈನ್ಸ್ ಡೇಗೆ ಆಪಲ್ ಐಪಾಡ್ ಕೊಡುಗೆ

(ಅಂದಾಜು ಬೆಲೆ 7845 ರೂ.)*
WD
ಈ ಬಾರಿ ವೆಲೆಂಟೈನ್ಸ್ ದಿನಕ್ಕೆ ನೀವು ನಿಮ್ಮ ಗೆಳೆಯ-ಗೆಳತಿಯರಿಗೆ ಉತ್ತಮ ಉಡುಗೊರೆ ನೀಡಿ, ನಿಮ್ಮ ಪ್ರೀತಿ ವ್ಯಕ್ತಪಡಿಸಲು ಇಚ್ಛಿಸಿದ್ದೀರಾದರೆ, ಗುಲಾಬಿ ಬಣ್ಣದಲ್ಲೇ ಬರುವ ಆಪಲ್ ಐಪಾಡ್ ನ್ಯಾನೋವನ್ನೇಕೆ ಪರಿಗಣಿಸಬಾರದು?

ವ್ಯಾಲೆಂಟೈನ್ ಡೇಗಾಗಿಯೇ ಸಿದ್ಧಪಡಿಸಲಾಗಿರುವ ಈ ಐಪಾಡ್‌ನಲ್ಲಿ ಐಪಾಡ್ ನ್ಯಾನೋದ ಇತರ ಮಾಡೆಲ್‌ಗಳಲ್ಲಿರುವ ಅದೆಷ್ಟೋ ಫೀಚರ್‌ಗಳಿವೆ. ಆದರೆ ಇದರ ತಿಳಿಗುಲಾಬಿ ಬಣ್ಣದ ಲುಕ್ ಇದೆಯಲ್ಲ... ಅದನ್ನು ಈ ದಿನವನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಲಾಗಿದೆ ಎಂಬುದು ಮನದಟ್ಟಾಗುತ್ತದೆ.

ಎರಡು ಇಂಚಿನ ಡಿಸ್‌ಪ್ಲೇ, 24 ಗಂಟೆ ಸಾಮರ್ಥ್ಯದ ಆಡಿಯೋ ಮತ್ತು 5 ಗಂಟೆ ಸಾಮರ್ಥ್ಯದ ವೀಡಿಯೋ ಪ್ಲೇಬ್ಯಾಕ್... ಇವುಗಳೆಲ್ಲಾ ಆಕರ್ಷಣೀಯ.

ಸದ್ಯಕ್ಕೆ 8 ಜಿಬಿ ಸಂಗ್ರಹ ಸಾಮರ್ಥ್ಯದ ಈ ಪಿಂಕ್ ನ್ಯಾನೋದ ಬೆಲೆ ಅಂದಾಜು 7845 ರೂ. ಅಂದಾಜು ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ.

* ಇದು ಅಂದಾಜು ಬೆಲೆ ಮಾತ್ರ. ಪ್ರದೇಶ ಮತ್ತು ಪರಿಸ್ಥಿತಿಗೆ ತಕ್ಕಂತೆ ಬೆಲೆಯಲ್ಲಿ ವ್ಯತ್ಯಾಸವಿರಬಹುದು.