ಮನೆಯಲ್ಲಿ ಹೇರ್ ಸ್ಪಾ ಮಾಡಿಕೊಳ್ಳುವ ಸುಲಭ ವಿಧಾನ ಇಲ್ಲಿದೆ..

ಗುರುವಾರ, 2 ಸೆಪ್ಟಂಬರ್ 2021 (07:33 IST)
ನಮ್ಮ ಜೀವನದ ಹಲವಾರು ವಿಚಾರಗಳ ಮೇಲೆ ಕೊರೊನಾ ಪರಿಣಾಮ ಬೀರಿದೆ. ಹಾಗೆಯೇ ನಮ್ಮ ತ್ವಚೆ ಮತ್ತು ಕೂದಲಿನ ಆರೈಕೆಯ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಮನೆಯಿಂದ ಕೆಲಸ ಮಾಡುವುದು ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತಿದೆ.

ನಮಗಾಗಿ ಸಮಯವನ್ನು ಮೀಸಲಿಡುವುದು ಬಹಳ ಕಷ್ಟವಾಗಿದೆ. ಕೆಲಸದ ಹಾಗೆ ನಮ್ಮ ಕೂದಲ ಆರೈಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಕೆಲಸದ ನಡುವೆ ಸ್ಪಾ ಹೋಗಲು ಸಮಯ ಸಿಗುವುದಿಲ್ಲ ಎಂಬುದು ಒಂದು ಕಾರಣವಾದರೆ, ಈಗಲು ಹಲವಾರು ಜನರು ಸಲೂನ್ಗಳಿಗೆ ಭೇಟಿ ನೀಡಲು ಭಯ ಪಡುತ್ತಾರೆ.   ಹಾಗಾಗಿ ಮನೆಯಲ್ಲಿ ಕೂದಲ ಕಾಳಜಿವಹಿಸುವುದು ಹೇಗೆ, ಮನೆಯಲ್ಲಿ ಸ್ಪಾ ಮಾಡಿಕೊಳ್ಳುವ ಸುಲಭ ವಿಧಾನ ಇಲ್ಲಿದೆ.  

ಮೊದಲ ನೀವು ನಿಮ್ಮ ದೊಡ್ಡ ಹಲ್ಲಿನ ಬಾಚಣಿಗೆಯ ಮೂಲಕ ಕೂದಲನ್ನು ಸರಿಯಾಗಿ ಬಾಣಿಕೊಳ್ಳಿ. ನಿಮ್ಮ ಕೂದಲಿನಲ್ಲಿರುವ ಸಿಕ್ಕುಗಳನ್ನು ತೆಗೆದುಹಾಕಿ. ಕೂದಲಿನಲ್ಲಿ ಸಿಕ್ಕುಗಳಿದ್ದರೆ ಸ್ಪಾ ಮಾಡುವಾಗ ಸಮಸ್ಯೆಯಾಗುತ್ತದೆ. ಪ್ರತಿ ಬಾರಿಯೂ ತಲೆ ಸ್ನಾನ ಮಾಡುವಾಗ ಹಾಗು ತಲೆಗೆ ಎಣ್ಣೆ ಹಾಕುವಾಗ ಕೂದಲಿನ ಸಿಕ್ಕುಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನ ಮರೆಯಬಾರದು.
ಈಗ, ನಿಮ್ಮ ತಾಯಿ ಮತ್ತು ಅಜ್ಜಿಯ ಸಲಹೆಯನ್ನು  ಪಾಲಿಸುವ ಸಮಯ ಬಂದಿದೆ. ತಲೆಯನ್ನು ಬಾಚಿಕೊಂಡ ನಂತರ ಎಣ್ಣೆಯನ್ನು ಹಚ್ಚಬೇಕು. ನಿಮ್ಮ ಕೂದಲಿಗೆ ಯಾವ ಎಣ್ಣೆ ಸೂಕ್ತ ಎಂಬುದು ನಿಮಗೆ ತಿಳಿದಿರುತ್ತದೆ. ಅದನ್ನು ಮಾತ್ರ ಬಳಕೆ ಮಾಡಿ. ಎಣ್ಣೆಯನ್ನು ಸರಿಯಾಗಿ ಕೂದಲಿನ ಬೇರುಗಳಿಗೆ ಹಚ್ಚಬೇಕು. ನಂತರ ನಿಮ್ಮ ಕೈನಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಸರಿಯಾಗಿ ಮಸಾಜ್ ಮಾಡಿ. ಮಸಾಜ್ ರಕ್ತ ಪರಿಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಇದು ಕೂದಲಿನ ಬೆಳವಣಿಗೆಗೆ ಸಹ ಕಾರಣವಾಗುತ್ತದೆ.

ಸುಮಾರು 10-15 ನಿಮಿಷಗಳ ನಂತರ, ಒಂದು ಟವಲ್ ತೆಗೆದುಕೊಂಡು ಅದನ್ನು  ಬಿಸಿ ನೀರಿನ ಬಕೆಟ್ನಲ್ಲಿ  ಮುಳುಗಿಸಿ.  ಟವಲ್ ಅನ್ನು ಹೊರತೆಗೆದು ನಿಮ್ಮ ತಲೆಯ ಸುತ್ತ ಕಟ್ಟಿಕೊಳ್ಳಿ. ಇದನ್ನು 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಈ ಸ್ಟೀಮಿಂಗ್ ಪ್ರಕ್ರಿಯೆಯು ನಿಮ್ಮ ಕೂದಲಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಮತ್ತು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟವೆಲ್ನ ಶಾಖವು ನಿಮ್ಮ ಕೂದಲಿಗೆ ಎಣ್ಣೆಯನ್ನು ಆಳವಾಗಿ ಹೀರಿಕೊಳ್ಳಲು  ಸಹಾಯ ಮಾಡುತ್ತದೆ.
ಎಣ್ಣೆ ಹಚ್ಚಿದ ಸುಮಾರು ಒಂದು ಗಂಟೆಗಳ ನಂತರ ನಿಮಗೆ ಬೇಕಾದ ಶಾಂಪೂ ಆಯ್ಕೆ ಮಾಡಿಕೊಂಡು ಕೂದಲನ್ನು ತೊಳೆಯಿರಿ. ಕೂದಲು ತೊಳೆಯುವಾಗ ಮಸಾಜ್ ಮಾಡಿ, ಯಾಕೆಂದರೆ ಕೂದಲಿನ ಬೇರುಗಳಲ್ಲಿರುವ ಎಣ್ಣೆಯ ಅಂಶವನ್ನು ತೆಗೆಯಲು ಸಹಾಯವಾಗುತ್ತದೆ. ಸುಮಾರು 2 ಬಾರಿ ಶಾಂಪೂ ಹಾಕಿ ತಲೆ ತೊಳೆಯುವುದು ಬಹಳ ಮುಖ್ಯ.
ಮುಂದಿನ ಹಂತವೆಂದರೆ ನಿಮ್ಮ ಪೋಷಿಸುವ ಕಂಡಿಷನರ್ ಅನ್ನು ತೆಗೆದುಕೊಂಡು ಕೂದಲಿಗೆ ಹಚ್ಚಬೇಕು. ಕಂಡಿಷನರ್ ಹಚ್ಚುವ ಮೊದಲು ಕೂದಲಿನಲ್ಲಿ ಎಣ್ಣೆಯ ಅಂಶವಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ನೆನಪಿಡಿ, ಯಾವುದೇ ಕಾರಣಕ್ಕೂ ಕಂಡಿಷನರ್ ಕೂದಲಿನ ಬೇರುಗಳಿಗೆ ತಾಗಿಸಬಾರದು.
ಒಮ್ಮೆ ಸ್ನಾನವಾದ ನಂತರ ನಿಮ್ಮ ಟವೆಲ್ ತೆಗೆದುಕೊಂಡು ಕೂದಲನ್ನು ಒಣಗಿಸಿ. ಬ್ಲೋ ಡ್ರೈಯರ್, ಸ್ಟ್ರೈಟ್ನರ್ ಅಥವಾ ಕರ್ಲರ್ ಸೇರಿದಂತೆ ಯಾವುದೇ ವಸ್ತುಗಳನ್ನು ಬಳಕೆ ಮಾಡದಿರುವುದು ಉತ್ತಮ. ಯಾಕೆಂದರೆ ಅವುಗಳು ಕೂದಲು ಉದರಲು ಕಾರಣವಾಗುತ್ತದೆ.
ನಿಮ್ಮ ಕೂದಲು ಸ್ವಲ್ಪ ತೇವವಾಗಿದ್ದಾಗ, ನೀವು ಬಳಸುವ  ಸೀರಮ್ನ ತೆಗೆದುಕೊಂಡು ಕೂದಲಿಗೆ ಹಚ್ಚಿ, ಮಸಾಜ್ ಮಾಡಿ. ಸ್ವಲ್ಪ ಮಾತ್ರ ಹಚ್ಚಬೇಕು. ಇದು ನಿಮ್ಮ ಕೂದಲು ಸುಕ್ಕಾಗುವುದನ್ನು ತಪ್ಪಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ