ಹೆಣ್ಣೆಂದು ಜರಿಯದಿರಿ!

ಗುರುವಾರ, 5 ಮಾರ್ಚ್ 2020 (15:43 IST)
ಬೆಂಗಳೂರು: ಅದೊಂದು ಕಾಲವಿತ್ತು..ಹೆಣ್ಣೆಂದರೆ ಹೀನಾಯವಾಗಿ ನೋಡುತ್ತಿದ್ದರು. ಹುಟ್ಟಿದ್ದು ಹೆಣ್ಣಾಗಿದ್ದರೆ ಮನಸೋ ಇಚ್ಛೆ ಜರಿಯುತ್ತಿದ್ದರು. ಯಾರದೋ ಮನೆ ಸೇರುವವಳು, ಖರ್ಚಿನ ಮೂಲ ಮತ್ತು ಜೋಪಾನ ಮಾಡಬೇಕಾಗಿದ್ದ ಅನಿವಾರ್ಯತೆ ಅಂತ! ಹೆಣ್ಣನ್ನುದುರ್ಬಲವೆಂದು ಸಾಬೀತುಪಡಿಸಲೊಂದಷ್ಟು ಗಾದೆಮಾತುಗಳು  ಹೆಣ್ಣೆಂದರೆ ಸೆರಗಲ್ಲಿಟ್ಟುಕೊಂಡ ಕೆಂಡ, ಕಳಚಿಕೊಳ್ಳದಿದ್ದರೆ ಸೀರೆಯನ್ನೇ ಸುಡುವಳು.. ಹೆಣ್ಣು ಹೆತ್ತವರು ತಗ್ಗಿ ಬಗ್ಗಿ ಇರಬೇಕು, ಇಂಥವೇ...

ಅವಳಿಗೆ ಶಿಕ್ಷಣ ಕೊಡಿಸುವಲ್ಲೂನಮ್ಮ ಸಮಾಜ ಹಿಂದುಳಿದುಬಿಟ್ಟಿತ್ತು. ಮುಂದೆ ಮುಂದೆ ಮನೆ ಕೆಲಸದ ಶಾಶ್ವತ ಆಳು ಮತ್ತು ಭೋಗದ ವಸ್ತುವನ್ನಾಗಿ ಮಾಡಿತು. ಪುರುಷ ಪ್ರಧಾನವಾದ ಅವ್ಯವಸ್ಥಿತ ಸಮಾಜ ರೂಪುಗೊಂಡೇ ಬಿಟ್ಟಿತು.
 

ಮನಸ್ಥಿತಿ ಬದಲಾಗತೊಡಗಿದ್ದು ಯುದ್ಧದಲ್ಲಿ  ಕಚ್ಚೆಯುಟ್ಟು ನಾರಿ ಜಯಭೇರಿ ಬಾರಿಸಿದಾಗ.‌ ಚಕ್ರವ್ಯೂಹ ನುಗ್ಗಿ ರಣತಂತ್ರವ ಭೇದಿಸಿದಾಗ, ವಿಜ್ಞಾನ ರಂಗದಲ್ಲಿ ಪುರುಷನ ಹಿಮ್ಮೆಟ್ಟಿಸಿ ಯಾನಾತಿಯಾನಗಳಲ್ಲಿ ಹಿಂತಿರುಗದೆ ಹಾರಿದಾಗ, ಮಗಳಾದರೆ "ಟೆನ್ ಶನ್"  ಹೋಗಿ ಮಗಳೆಂದರೆ "ಟೆನ್ ಸನ್" ಗೆ ಸಮ ಅನ್ನುವಲ್ಲಿಗೆ ಬಂದು ನಿಂತಿದೆ.

                         -ವಾಣಿ ಶೆಟ್ಟಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ