ಅರ್ಧಚಂದ್ರಾಸನ

ಈ ಆಸನವು ಅರ್ಧ ಚಂದ್ರದ ಆಕೃತಿಯಲ್ಲಿರುವುದರಿಂದ ಇದಕ್ಕೆ ಅರ್ಧಚಂದ್ರಾಸನ ಎಂದು ಕರೆಯಲಾಗುತ್ತದೆ.

ವಿಧಾನ:

ಮೊದಲಿಗೆ ತಾಡಾಸನದ ಭಂಗಿಯಲ್ಲಿ ನಿಲ್ಲಿರಿ. (ಹಿಮ್ಮಡಿ ಮತ್ತು ಹೆಬ್ಬೆರಳು ಒಂದಕ್ಕೊಂದು ತಾಗಿರುವಂತೆ ನಿಲ್ಲಿ, ಬೆನ್ನು ನೇರವಾಗಿರಲಿ ಮತ್ತು ಅಂಗೈಯನ್ನು ಒಳಮುಖವಾಗಿರಿಸಿ ನೇರವಾಗಿ ನಿಲ್ಲಿ.)

ಎರಡೂ ಕಾಲುಗಳನ್ನು ಪರಸ್ಪರ ದೂರ ಮಾಡಿ ವಿಶ್ರಾಮ ರೀತಿಯಲ್ಲಿ ನಿಲ್ಲಿ.

ನಿಧಾನವಾಗಿ ಉಸಿರೆಳೆದುಕೊಳ್ಳುತ್ತಾ, ಎಡಗೈಯನ್ನು ನೇರವಾಗಿ ಮೇಲಕ್ಕೆ ಎತ್ತಿ. ಇಡೀ ಶರೀರವನ್ನು ನೇರವಾಗಿ ಬಲ ಪಾರ್ಶ್ವಕ್ಕೆ ಬಾಗಿಸಿ. ಬಲಗೈಯನ್ನು ಭೂಮಿಗೆ ಲಂಬವಾಗಿ ಕೆಳಮುಖವಾಗಿ ಮಣಿಗಂಟಿನ ಕೆಳಗೆ ಎಷ್ಟು ಸಾಧ್ಯವೋ ಅಷ್ಟು ಜಾರಿಸಿ. ಎಡಗೈ ಎಡಕಿವಿಯ ಮೇಲಿಂದ ಬಂದು ಭೂಮಿಗೆ ಸಮಾನಾಂತರವಾಗಿರಲಿ.

ದೇಹದ ಭಾರವು ಬಹುತೇಕ ಬಲಕಾಲಿನ ಮೇಲಿರುತ್ತದೆ. ಈ ಭಂಗಿಯು ಅರ್ಧ ಚಂದ್ರಾಕಾರವನ್ನು ಹೋಲುತ್ತದೆ.
WD


ನಿಧಾನವಾಗಿ ಎಡಗೈಯನ್ನು ಮರಳಿ ನೇರಸ್ಥಿತಿಗೆ ತರುತ್ತಾ, ದೇಹವನ್ನು ನೇರವಾಗಿಸುತ್ತಾ ನಿಧಾನವಾಗಿ ಸಮಸ್ಥಿತಿಗೆ ಬನ್ನಿ.

ಇದೇ ವಿಧಾನವನ್ನು ಎಡಪಾರ್ಶ್ವಕ್ಕೆ ಬಾಗಿಸುವ ಮೂಲಕ ಮಾಡಿ. ಇಲ್ಲಿ ಎಡಗೈ ಭೂಮಿಗೆ ಲಂಬವಾಗಿರುತ್ತದೆ ಮತ್ತು ಬಲಗೈ ಭೂಮಿಗೆ ಸಮಾನಾಂತರವಾಗಿ ಬಲಕಿವಿಯ ಮೇಲಿರುತ್ತದೆ.

ಉಪಯೋಗ:

ಅರ್ಧಚಂದ್ರಾಸನವು ಪಕ್ಕೆಲುಬುಗಳ ಕೆಳಗಿನ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ಒದಗಿಸುತ್ತದೆ. ಈ ಆಸನ ಮಾಡುವುದರಿಂದ ತೊಡೆಯ ಸ್ನಾಯುಗಳೂ ಬಲಗೊಳ್ಳುತ್ತವೆ.

ವೆಬ್ದುನಿಯಾವನ್ನು ಓದಿ