ಭುಜಂಗಾಸನ

ಸಂಸ್ಕೃತದಲ್ಲಿ ಭುಜಂಗ ಅಂದರೆ ಸರ್ಪ ಎಂದರ್ಥ ಮತ್ತು ಆಸನ ಎಂದರೆ ವ್ಯಾಯಾಮ. ಇದೇ ಶಬ್ದಗಳಿಂದ ಉತ್ಪತ್ತಿಯಾದದ್ದು ಭುಜಂಗಾಸನ.

• ಇದು ತೀರಾ ಸರಳ ವ್ಯಾಯಾಮ. ಆದರೆ ತಪ್ಪುಗಳನ್ನು ಮಾಡುವುದು ಕೂಡ ಸುಲಭ. ಆದುದರಿಂದ ಗರಿಷ್ಠ ಪ್ರಯೋಜನ ಪಡೆಯಬೇಕಿದ್ದರೆ ಪೂರ್ತಿ ವಿವರಗಳಿಗೆ ಲಕ್ಷ್ಯ ಕೊಡಬೇಕಾಗುತ್ತದೆ. (ವೀಡಿಯೋ ನೋಡಿ...) ಆರಾಮವಾಗಿ ಮತ್ತು ನಿಧಾನವಾಗಿ ಈ ಆಸನ ಮಾಡಬೇಕಾಗುತ್ತದೆ. ಬೆನ್ನಿನ ಸ್ನಾಯುಗಳಿಗೆ ತೊಂದರೆಯಾಗುವಂತೆ ಮತ್ತು ಅವಸರವಸರವಾಗಿ, ದಿಢೀರ್ ಅಂಗಚಲನೆಗಳ ಮೂಲಕ ಇದನ್ನು ಮಾಡಬಾರದು.

• ಭುಜಂಗಾಸನದ ನಂತರ ಶಲಭಾಸನ ಮತ್ತು ಧನುರಾಸನ ಮಾಡಿದರೆ ಪೂರ್ಣ ಪ್ರಯೋಜನ ದೊರಕುತ್ತದೆ. ಈ ಮೂರೂ ಆಸನಗಳು ಪರಸ್ಪರ ಪೂರಕವಾಗಿರುವುದರಿಂದ ಒಂದರ ನಂತರ ಒಂದು ಮಾಡಿದಲ್ಲಿ ಉತ್ತಮ.

• ಭುಜಂಗಾಸನವನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತದೆ. ಸಾಮಾನ್ಯ ಮತ್ತು ಕ್ರಿಯಾಶೀಲ ಹಂತಗಳು


ಪ್ರಯೋಜನಗಳು:

• ಇದು ವಿಶೇಷವಾಗಿ ಅಸಮರ್ಪಕ ಋತುಚಕ್ರದಿಂದ ಬಳಲುತ್ತಿರುವ ಮಹಿಳೆಯರಿಗೆ ಪ್ರಯೋಜನಕರ.

• ಅಂಡಾಣುಗಳು ಮತ್ತು ಗರ್ಭಕೋಶದ ಕೆಲವು ಸಮಸ್ಯೆಗಳನ್ನು ಕೂಡ ಈ ಭುಜಂಗಾಸನ ಗುಣಪಡಿಸುತ್ತದೆ.

• ಭುಜಂಗಾಸನವು ಅಂಡಕೋಶ ಮತ್ತು ಗರ್ಭಾಶಯದ ಸುತ್ತುಮುತ್ತಲಿನ ಪ್ರದೇಶದ ಕ್ರಿಯೆಯನ್ನು ಸರಿಪಡಿಸುತ್ತದೆ. ಉದರ ಭಾಗಕ್ಕೆ ಒತ್ತಡ ಬೀಳುವುದರಿಂದ ಇದು ಸಾಧ್ಯವಾಗುತ್ತದೆ.

• ಡಯಾಬಿಟೀಸ್ ಉಳ್ಳವರಿಗೆ ಕೂಡ ಇದು ಧನಾತ್ಮಕ ಪರಿಣಾಮ ಬೀರುತ್ತದೆ. ಭುಜಂಗಾಸನವು ಮೇದೋಜೀರಕಾಂಗದ ಚಟುವಟಿಕೆಯನ್ನು ಉತ್ತೇಜಿಸುತ್ತದೆ.
WD


• ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಭುಜಂಗಾಸನ ಅತ್ಯಂತ ಸೂಕ್ತವಾದುದು.

• ಅಸಮರ್ಪಕ ಮಲ ವಿಸರ್ಜನೆ ಸಮಸ್ಯೆ ಇರುವವರಿಗೆ ಕೂಡ ಇದು ಅತ್ಯಂತ ಪ್ರಯೋಜನಕರ. ಭುಜಂಗಾಸನ ಮಾಡುವಾಗ ಉದರಭಾಗಕ್ಕೆ ಉಂಟಾಗುವ ಒತ್ತಡವು ಕರುಳಿನಿಂದ ಗುದ ಭಾಗಕ್ಕೆ ಮಲವನ್ನು ತಳ್ಳಲು ಪೂರಕವಾಗುತ್ತದೆ.

• ಜಠರ/ಕರುಳಿನ ವಾಯು ಶೂಲೆಗೆ ಭುಜಂಗಾಸನ ರಾಮಬಾಣ. ಈ ಆಸನವು ಕರುಳು ಮತ್ತು ಉದರದಿಂದ ವಾಯುವನ್ನು ಹೊರಹಾಕುತ್ತದೆ.

• ಭುಜಂಗಾಸನವು ಕತ್ತು ಮತ್ತು ಬೆನ್ನಿನ ಎಲ್ಲ ರೀತಿಯ ನೋವುಗಳಿಗೂ ಶಮನಕಾರಿ.

• ಬಿಳಿ ಕಾಲರ್ ಉದ್ಯೋಗದಲ್ಲಿರುವವರಿಗಂತೂ ಇದು ಅತ್ಯುತ್ತಮ.

• ಐಟಿ ಕ್ಷೇತ್ರದಲ್ಲಿರುವವರು ಕೂಡ ಭುಜಂಗಾಸನ ಮಾಡಿದರೆ ಒಳಿತು. ಯಾಕೆಂದರೆ ಇದು ದೇಹ ಮತ್ತು ಮನಸ್ಸಿಗೆ ಪರಿಪೂರ್ಣ ವ್ಯಾಯಾಮ ನೀಡುತ್ತದೆ.