ಬಿಡದೇ ಕಾಡುವ ಕೆಮ್ಮಿಗೆ ಒಂದು ಸಿಂಪಲ್ ಮದ್ದು ಇಲ್ಲಿದೆ ನೋಡಿ

ಗುರುವಾರ, 6 ಸೆಪ್ಟಂಬರ್ 2018 (08:59 IST)
ಬೆಂಗಳೂರು: ಮಳೆಗಾಲ, ಚಳಿಗಾಲ ಬಂತೆಂದರೆ ಶೀತ ಕೆಮ್ಮು ಜತೆಗೇ ಬರುವುದು ಸಹಜ. ಎಷ್ಟೇ ಔಷಧ ಖಾಲಿ ಮಾಡಿದರೂ ಬಿಡದೇ ಕಾಡುವ ಕೆಮ್ಮಿನಿಂದ ಕಿರಿ ಕಿರಿ ಅನುಭವಿಸುತ್ತಿದ್ದೀರಾ?

ಹಾಗಿದ್ದರೆ ಸಿಂಪಲ್ ಮನೆ ಮದ್ದು ಮನೆಯಲ್ಲೇ ಮಾಡಿ ನೋಡಿ. ಇದಕ್ಕೆ ಬೇಕಾಗಿರುವುದು ಏಲಕ್ಕಿ, ಜೇನು ತುಪ್ಪ, ಕಲ್ಲು ಉಪ್ಪು ಮತ್ತು ತುಪ್ಪ.

ಮೇಲೆ ಹೇಳಿದ ವಸ್ತುಗಳನ್ನು ಮಿಕ್ಸ್ ಮಾಡಿ ಆಗಾಗ ಸೇವಿಸುತ್ತಿರಿ. ಇದರಿಂದ ಒತ್ತೊತ್ತಾಗಿ ಬರುವ ಕೆಮ್ಮಿನಿಂದ ಕೊಂಚ ರಿಲೀಫ್ ಪಡೆಯಬಹುದು. ಏಲಕ್ಕಿ ನಮ್ಮ ಗಂಟಲಿನ ಸೋಂಕು, ಕಿರಿ ಕಿರಿ ಹೋಗಲಾಡಿಸುವ ಗುಣ ಹೊಂದಿದೆ ಎಂದು ಆಯುರ್ವೇದ ಹೇಳುತ್ತದೆ. ಇದೇ ಕಾರಣಕ್ಕೆ ಕೆಮ್ಮು, ಶೀತಕ್ಕೆ ಇದು ರಾಮಬಾಣ. ಮಾಡಿ ನೋಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ