ಕಮ್ಮಿ ತಿಂದು ತೂಕ ನಿಯಂತ್ರಿಸಿಕೊಳ್ಳಿ

ಕಡಿಮೆ ತಿನ್ನುವ ಹವ್ಯಾಸವು ನಡು ವಯಸ್ಸಿನಲ್ಲಿ ಬೊಜ್ಜು ಬೆಳೆಯುವಿಕೆಗೆ ತಡೆಯೊಡ್ಡುತ್ತದೆಯಂತೆ. ಹೀಗೆಂದು ಹೊಸ ಅಧ್ಯಯನ ಒಂದು ಹೇಳುತ್ತದೆ. ತಮ್ಮ ತಿನ್ನುವಿಕೆಯ ಮೇಲೆ ಕಡಿವಾಣ ಹಾಕದವರಲ್ಲಿ ಬೊಜ್ಜಿನ ಅಪಾಯ ಎರಡುಪಟ್ಟಿಗಿಂತಲೂ ಅಧಿಕ ಎಂದು ಅಧ್ಯಯನ ಕಂಡುಕೊಂಡಿದೆ.

"ನಿಯಂತ್ರಿತ ಆಹಾರ ಸೇವನೆ ಉತ್ತಮವಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ನಿಯಂತ್ರಿತವಲ್ಲದ ಆಹಾರ ಸೇವನೆಯ 192 ಮಧ್ಯ ವಯಸ್ಕ ಮಹಿಳೆಯರನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಮೂರು ವರ್ಷಗಳ ಕಾಲ ಇವರ ಜೀವನ ಪದ್ಧತಿ, ಆರೋಗ್ಯ ಮತ್ತು ಆಹಾರ ಪದ್ಧತಿಗಳ ಮೇಲೆ ನಿಗಾ ವಹಿಸಲಾಗಿತ್ತು. ತಮ್ಮ ತಿನ್ನುವಿಕೆಯ ಮೇಲೆ ನಿಯಂತ್ರಣ ಹೇರದ ಮಹಿಳೆಯರಲ್ಲಿ ತೂಕ ಹೆಚ್ಚುವ ಸಾಧ್ಯತೆ ಶೇ.138ರಷ್ಟು ಹೆಚ್ಚು ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

ಈ ಅಧ್ಯಯನದ ಅಂಶಗಳು ದೇಹ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಅಧ್ಯಯನದಲ್ಲಿ ಪಾಲ್ಗೊಳ್ಳದ ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಂಶೋಧಕ ಲ್ಯಾನ್ಸ್ ಡೇವಿಡ್ಸನ್ ಹೇಳಿದ್ದಾರೆ.

ವಯಸ್ಸಾಗುತ್ತಿರುವ ದೇಹದ ಶಕ್ತಿ ಅವಶ್ಯಕತೆಗಳು ಕುಂಟಿತಗೊಳ್ಳುವ ಕಾರಣ ಶಕ್ತಿವರ್ಧಕ ಆಹಾರ ಸೇವನೆಯಲ್ಲಿ ಕಡಿತಗೊಳ್ಳಬೇಕು ಇಲ್ಲವೇ ತೂಕ ಹೆಚ್ಚಳ ಉಂಟಾಗುತ್ತದೆ ಎಂದು ಕೊಲಂಬಿಯಾ ಒಬೆಸಿಟಿ ರೀಸರ್ಚ್ ಕೇಂದ್ರದ ಡೇವಿಡ್‌ಸನ್ ಹೇಳಿದ್ದಾರೆ.

ಕಡಿಮೆ ತಿನ್ನುವುದು ನಿಮ್ಮ ಸೌಂದರ್ಯ ರಕ್ಷಣೆ ಅಥವಾ ದೈಹಿಕ ಆಕೃತಿಯ ರಕ್ಷಣೆಗೆ ಮಾತ್ರವಲ್ಲ, ಇದು ನಿಮ್ಮ ಆರೋಗ್ಯ ಸಂರಕ್ಷಣೆಗೂ ಅತ್ಯಗತ್ಯ ಎಂದು ಡಾ. ತಕರ್ ಹೇಳಿದ್ದಾರೆ.

ತೂಕ ಹೆಚ್ಚಳ ಮತ್ತು ಬೊಜ್ಜಿನಿಂದ ಮಧುಮೇಹದ ಅಪಾಯ ಹೆಚ್ಚಾಗಿದೆ. ಅಲ್ಲದೆ ಇತರ ಹಲವು ಖಾಯಿಲೆಗಳಿಗೂ ಬೊಜ್ಜು ಕಾರಣವಾಗುತ್ತದೆ. ಸೂಕ್ತ ಆಹಾರ ಸೇವನೆಯೂ ಒಂದು ಕಲೆ. ಇದರ ಅಭ್ಯಾಸದ ಅಗತ್ಯವಿದೆ ಎಂದೂ ಟಕರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ