ಬೊಜ್ಜು, ಕ್ಯಾನ್ಸರ್ ತಡೆಗೆ ಹೊಸ ಸೋಯಾ!

ಮಂಗಳವಾರ, 26 ಮೇ 2009 (11:29 IST)
ಆಹಾರ ಮತ್ತು ಪೌಷ್ಠಿಕಾಂಶದ ಪ್ರೊಫೆಸರ್ ಒಬ್ಬರು ವೃದ್ಧಿ ಪಡಿಸಿರುವ ಸೋಯಾ ಕಾಳು ಬೊಜ್ಜನ್ನು ನಿಭಾಯಿಸುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ ಎಂಬುದಾಗಿ ಹೊಸ ಅಧ್ಯಯನ ಒಂದು ಹೇಳಿದೆ.

ಸೂ-ಯೋವುನ್ ಲೀ ಎಂಬ ಇಲಿನಾಯಿಸ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಅವರು ದಾಲ್ಚಿನ್ನಿಯ ಘಮಬೀರುವ ಸೋಯಾ ಧಾನ್ಯ ಒಂದನ್ನು ಅಭಿವೃದ್ಧಿ ಪಡಿಸಿದ್ದು, ಇದು ಮೂತ್ರ ಕೋಶದ ಗ್ರಂಥಿ(ಪ್ರಾಸ್ಟೇಟ್) ಹಾಗೂ ಸ್ತನ ಕ್ಯಾನ್ಸರ್ ಅಪಾಯವನ್ನು ತಪ್ಪಿಸುತ್ತದೆ ಎಂದು ಹೇಳಿದ್ದಾರೆ.

ಇತರ ಕಾಳುಗಳಂತೆ ಇದರಲ್ಲಿ ಹೆಚ್ಚಿನ ಮಟ್ಟದ ಶರ್ಕರ ಪಿಷ್ಠಗಳು ಇರುವುದಿಲ್ಲ. ಒಂದು ಬೌಲ್ ಕಾಳಿನಲ್ಲಿ 10 ಗ್ರಾಂ ಪ್ರೊಟೀನ್ ಹಾಗೂ ಐದು ಗ್ರಾಂ ಫೈಬರ್ ಹೊಂದಿರುತ್ತದೆ. ಇದು ಹಸಿವೆಯನ್ನು ದೂರಮಾಡುತ್ತದೆ. ಸೋಯಾವನ್ನು ಇದೀಗಾಗಲೇ ಇತರ ಕಾಳುಗಳೊಂದಿಗೆ ಒಂದು ಅಂಶವಾಗಿ ಬಳಸಲಾಗಿದೆ. ಆದರೆ ಇದನ್ನೇ ಮೂಲವಾಗಿ ಬಳಸಿಲ್ಲ.

"ಸೋಯಾ ಸೇವಿಸಲು ಹಲವಾರು ಕಾರಣಗಳಿವೆ. ಆದರೆ ಅದನ್ನು ಬೆಳಗಿನ ಉಪಹಾರವಾಗಿ ಸೇವಿಸಲು ಇನ್ನಷ್ಟು ಕಾರಣಗಳಿವೆ. ಇದು ಸ್ತನ ಕ್ಯಾನ್ಸರ್ ಹಾಗೂ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ ಮತ್ತು ಕೊಲೆಸ್ಟರಾಲ್ ಕಡಿಮೆಗೊಳಿಸುತ್ತದೆ" ಎಂಬುದಾಗಿ ಡಾ| ಲೀ ಹೇಳುತ್ತಾರೆ.

"ಅಲ್ಲದೆ ಇದರಲ್ಲಿರುವ ಪ್ರೊಟೀನುಗಳು ಬೊಜ್ಜನ್ನು ತಡೆಯಲು ಪರಿಣಾಮಕಾರಿಯಾಗಿದೆ. ಸೋಯಾ ಪೌಷ್ಠಿಕಾಂಶವು ಅತ್ಯಂತ ಉನ್ನತ ಗುಣಮಟ್ಟದ್ದಾಗಿದ್ದು, ದಿನದ ಆರಂಭದಲ್ಲೇ ಸೇವಿಸಿರುವ ಉನ್ನತ ಗುಣಮಟ್ಟದ ಪೌಷ್ಠಿಕಾಂಶದ ಊಟವು ಹಸಿವನ್ನು ತಡೆಯುವ ಕಾರಣ ನೀವು ಕಡಿಮೆ ತಿನ್ನುತ್ತೀರಿ" ಎಂದು ಅವರು ಹೇಳುತ್ತಾರೆ.

ಈ ಸೋಯಾವು ಐಸೋಫ್ಲೇವನ್ಸ್ ಹಾಗೂ ಪ್ಲಾಂಟ್ ಹಾರ್ಮೋನ್‌ಗಳನ್ನು ಹೊಂದಿರುವ ಕಾರಣ ಇದು ಅಸ್ಥಿರಂಧ್ರತೆಯನ್ನು ತಡೆಯುತ್ತದೆ ಮತ್ತು ಕೆಲವು ಕ್ಯಾನ್ಸರ್‌ಗಳನ್ನು ತಡೆಯುತ್ತದೆ ಎಂದು ಅವರು ಹೇಳುತ್ತಾರೆ.

ಈ ಸೋಯಾವನ್ನು ಮಾರುಕಟ್ಟೆಗೆ ಬಿಡುವ ಮುನ್ನ ಅದರ ಪರಿಮಳವನ್ನು ಸುಧಾರಿಸಲು ಸಂಶೋಧಕಿ ಲೀ ಅವರು ಪ್ರಯತ್ನಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ