ಮೆಣಸಿನ ಮೊಟ್ಟೆಗಳು

ಬೇಕಾಗುವ ಸಾಮಾನು:

ಅರ್ಧವಾಗಿ ಕತ್ತರಿಸಿದ 4 ಬೇಯಿಸಿದ ಮೊಟ್ಟೆಗಳು, ಒಂದು ಚಮಚ ಎಣ್ಣೆ ,1 ಮಧ್ಯಮ ಗಾತ್ರದ ಈರುಳ್ಳಿ ,ಅರ್ಧ ಚಮಚ ಶುಂಠಿ ,ಬೆಳ್ಳುಳ್ಳಿ ಪೇಸ್ಟ್ . ಅರ್ಧ ಟೀ ಚಮಚ ಕೊತ್ತಂಬರಿ ಸೊಪ್ಪು(ಕತ್ತರಿಸಿದ) ಒಂದೂವರೆ ಟೀ ಚಮಚ ಜಜ್ಜಿದ ಮೆಣಸು , ಒಂದೂಕಾಲು ಟೀ ಚಮಚ ಉಪ್ಪು ,2 ಟೀ ಚಮಚ ನಿಂಬೆರಸ.

ತಯಾರಿಸುವ ವಿಧಾನ :

ಪಾತ್ರೆಯಲ್ಲಿ ಎಣ್ಣೆ ಕಾಯಿಸಿ, ಈರುಳ್ಳಿ ಸೇರಿಸಿ 3 ನಿಮಿಷ ಹುರಿಯಿರಿ.ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಒಂದು ನಿಮಿಷ ಕಲಕಿ. ಕೊತ್ತಂಬರಿ ಮತ್ತು ಮೆಣಸು ಸೇರಿಸಿ 2ನಿಮಿಷ ಕಲಕಿರಿ.ಮೊಟ್ಟೆಗಳ್ನನು ಸೇರಿಸಿ ಒಂದು ನಿಮಿಷ ಮೇಲೆ ಕೆಳಗೆ ಮಾಡಿ. ಉಪ್ಪು ಉದುರಿಸಿ,ನಿಂಬೆ ಸೇರಿಸಿ ಮತ್ತೆ ಒಂದು ನಿಮಿಷ ಮೇಲೆ ಕೆಳಗೆ ಮಾಡಿ, ಅನ್ನ ಅಥವಾ ರೊಟ್ಟಿಯೊಂದಿಗೆ ತಿನ್ನಲು ಕೊಡಿ ರುಚಿಕರವಾಗಿರುತ್ತದೆ.

ವೆಬ್ದುನಿಯಾವನ್ನು ಓದಿ