ಕಿತ್ತಳೆ ಕೇಕ್

ಬೇಕಾಗುವ ಸಾಮಗ್ರಿ- ಒಂದು ಕಪ್ ಸಕ್ಕರೆ, 5 ಮೊಟ್ಟೆಯ ಹಳದಿ ಲೋಳೆ, ಒಂದು ಕಿತ್ತಳೆ ಹಣ್ಣಿನ ರಸ, ಒಂದು ಕಪ್ ಆಲ್ ಪರ್ಪಸ್ ಫ್ಲೋರ್, ಮೂರುವರೆ ಚಮಚ ಬೇಕಿಂಗ್ ಪೌಡರ್.

ಮಾಡುವ ವಿಧಾನ- ದೊಡ್ಡ ಪಾತ್ರೆಯಲ್ಲಿ ಸಕ್ಕರೆ, ಮೊಟ್ಟೆಯ ಹಳದಿ ಲೋಳೆ, ಕಿತ್ತಳೆ ರಸ, ಆಲ್ ಪರ್ಪಸ್ ಫ್ಲೋರ್, ಬೇಕಿಂಗ್ ಪೌಡರ್ ಎಲ್ಲವನ್ನೂ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮೊಟ್ಟೆ ಬಿಳಿ ಲೋಳೆಯಲ್ಲಿ ಫೋಲ್ಡ್ ಮಾಡಿ 375 ಡಿಗ್ರಿಯಲ್ಲಿ 10 ನಿಮಿಷ ಬೇಕ್ ಮಾಡಿ. ನಂತರ ಉಷ್ಣತೆಯನ್ನು 350 ಡಿಗ್ರಿಗೆ ಇಳಿಸಿ 30 ನಿಮಿಷ ಬೇಕ್ ಮಾಡಿ. ಓವನ್‌ನಿಂದ ಕೇಕ್ ಹೊರತೆಗೆದ ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಇದನ್ನು ಡೈಮಂಡ್ ಆಕಾರದಲ್ಲಿ ಕತ್ತರಿಸಿ.

ವೆಬ್ದುನಿಯಾವನ್ನು ಓದಿ