ಚೆನ್ನಾ ಲಡ್ಡು

ಬೇಕಾಗುವ ಸಾಮಗ್ರಿ- 100 ಗ್ರಾಂ ಹುರಿದ ಚೆನ್ನಾ (ದೊಡ್ಡ ಕಡಲೆಕಾಳು), 180ರಿಂದ 200 ಗ್ರಾಂ ಸಕ್ಕರೆ, 100 ಗ್ರಾಂ ತುಪ್ಪ ಒಂದು ಚಮಚ ಏಲಕ್ಕಿ, ಆರು ಗೋಡಂಬಿ.

ಮಾಡುವ ವಿಧಾನ- ಹುರಿದ ಚೆನ್ನಾವನ್ನು ಚೆನ್ನಾಗಿ ಪಡಿ ಮಾಡಿ. ಸಕಕರೆಯನ್ನು ಪ್ರತ್ಯೇಕವಾಗಿ ನಯವಾಗಿ ಪುಡಿ ಮಾಡಿ. ನಂತರ ಸಕ್ಕರೆ, ಚೆನ್ನಾ ಹಾಗೂ ಏಲಕ್ಕಿ ಪುಡಿಗಳನ್ನು ಮಿಕ್ಸ್ ಮಾಡಿ. ಒಂದು ಚಮಚ ತುಪ್ಪ ಬಿಸಿ ಮಾಡಿ ಗೋಡಂಬಿಯನ್ನು ಹೊಂಬಣ್ಣ ಬರುವಂತೆ ಹುರಿಯಿರಿ. ಅದನ್ನು ಸಣ್ಣದಾಗಿ ಕತ್ತರಿಸಿ ಮಿಶ್ರಣಕ್ಕೆ ಸೇರಿಸಿ ಕಲಸಿ. ದೊಡಡ್ ಪಾತ್ರಯಲ್ಲಿ ಉಳಿದ ತುಪ್ಪ ಬಿಸಿ ಮಾಡಲು ಇಡಿ. ಇದಕ್ಕೆ ಚೆನ್ನಾ, ಸಕ್ಕರೆ, ಏಲಕ್ಕಿ, ಗೋಡಂಬಿಯ ಮಿಶ್ರಣವನ್ನ ಸೇರಿಸಿ. ಚೆನ್ನಾಗಿ ತಿರುವುತ್ತಲೇ ಇರಿ. ದಪ್ಪವಾಗುತ್ತಾ ಬಂದ ತಕ್ಷಣ ಕೆಳಗಿಳಿಸಿ ತಣ್ಣಗಾಗಲು ಬಿಡಿ.

ವೆಬ್ದುನಿಯಾವನ್ನು ಓದಿ