ಸಿಂಹವಾಹನ, ಮುತ್ತಿನ ಚಪ್ಪರ ವಾಹನ ಸಂಭ್ರಮ

WD
ತಿರುಮಲ ಶ್ರೀ ವೆಂಕಟರಮಣ ಸನ್ನಿಧಿಯಲ್ಲಿ ಬ್ರಹ್ಮೋತ್ಸವ ವೈಭವವು ಉತ್ತುಂಗಕ್ಕೇರುತ್ತಿರುವಂತೆಯೇ, ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ.

ಸೋಮವಾರ ಬೆಳಿಗ್ಗೆ 9 ಗಂಟೆಗೆ ಆರಂಭವಾಗಿ ಎರಡು ಗಂಟೆಗಳ ಕಾಲ ನಡೆದ ಸಿಂಹವಾಹನ ಉತ್ಸವವು ಜನಮನ ಸೂರೆಗೊಂಡಿದ್ದು, ಸಾಲಂಕೃತ ದೇವರನ್ನು ಸಿಂಹವಾಹನದಲ್ಲಿ ಕಂಡ ಭಕ್ತರು, ವೆಂಕಟೇಶ ವೈಭವವನ್ನು ಕಂಡು ಪಾವನರಾದರು.

ರಾತ್ರಿ ಉಯ್ಯಾಲೆ ಸೇವೆಯ ಬಳಿಕ ಶ್ರೀ ವೆಂಕಟೇಶ್ವರನು ಮುತ್ತಿನ ಚಪ್ಪರವುಳ್ಳ ವಾಹನದಲ್ಲಿ (ಮುತ್ಯಪುಪಂದಿರಿ) ಕುಳಿತು, ವೈಭವೋಪೇತ ಮೆರವಣಿಗೆಯಲ್ಲಿ ಸಾಗಲಿದ್ದಾನೆ.

ರಾಜಬೀದಿಗಳೆಲ್ಲವೂ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದ್ದು, ಬಿಗಿ ಪೊಲೀಸ್ ಪಹರೆಯನ್ನು ಕೂಡ ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದೆ.

ನಾಳೆ ಬೆಳಿಗ್ಗೆ ಕಲ್ಪವೃಕ್ಷ ವಾಹನ ಉತ್ಸವ ಹಾಗೂ ಸಂಜೆ ಸರ್ವಭೂಪಾಲ ಉತ್ಸವಗಳು ನಡೆಯಲಿವೆ.

ವೆಬ್ದುನಿಯಾವನ್ನು ಓದಿ