ಸೂರ್ಯ-ಚಂದ್ರ ವಾಹನದಲ್ಲಿ ಶ್ರೀನಿವಾಸ ವೈಭವ

ಬ್ರಹ್ಮೋತ್ಸವದ ಏಳನೇ ದಿನವಾದ ಶುಕ್ರವಾರ ಬೆಳಿಗ್ಗೆ ಶ್ರೀ ವೆಂಕಟರಮಣನು ಸೂರ್ಯಪ್ರಭ ವಾಹನದಲ್ಲಿ ಸಂಚರಿಸಿದಾಗ ನೆರೆದ ಭಕ್ತಾದಿಗಳ ಮನದಲ್ಲಿ ಭಕ್ತಿಭಾವದ ಸಂಚಲನವಾಯಿತು.

ವಿಷ್ಣು ದೇವರು ವಿಶ್ವದ ಕೇಂದ್ರ ಬಿಂದುವಾಗಿದ್ದರಿಂದ ಶ್ರೀ ವೆಂಕಟರಮಣ ಸೂರ್ಯಪ್ರಭ ವಾಹನದಲ್ಲಿ ಸಂಚರಿಸುತ್ತಾರೆ ಎಂದು ಹೇಳಲಾಗುತ್ತದೆ.

ಸಾಯಂಕಾಲ ತಂಪು ಮತ್ತು ಪ್ರಶಾಂತತೆಯ ಸಂಕೇತವಾಗಿರುವ ಚಂದ್ರನ ಪ್ರತೀಕವಾಗಿ ಚಂದ್ರಪ್ರಭ ವಾಹನದಲ್ಲಿ ಶ್ರೀದೇವರ ಮೆರವಣಿಗೆ ನಡೆಯುತ್ತಿದ್ದು, ಭಕ್ತಾದಿಗಳು ಭಗವನ್ನಾಮ ಸ್ಮರಣೆಯೊಂದಿಗೆ ರಥಬೀದಿಯಲ್ಲಿ ಶ್ರೀದೇವರ ವೈಭವದ ಸವಾರಿಯನ್ನು ಕಾಣಲು ಕಾತುರರಾಗಿದ್ದಾರೆ.

ನಾಳೆ ಬೆಳಿಗ್ಗೆ ರಥೋತ್ಸವ ಹಾಗೂ ಸಂಜೆ ಅಶ್ವವಾಹನೋತ್ಸವ ನಡೆಯಲಿದೆ.

ವೆಬ್ದುನಿಯಾವನ್ನು ಓದಿ