ತಿರುಮಲಾಧೀಶನಿಗೆ ರಥೋತ್ಸವ ವೈಭವ

WD
ತಿರುಮಲ ಶ್ರೀ ವೆಂಕಟೇಶ್ವರನ ಸನ್ನಿಧಿಯಲ್ಲಿ ವಾರ್ಷಿಕ ಬ್ರಹ್ಮೋತ್ಸವ ವಿಧಿಗಳು ಅಂತಿಮ ಹಂತ ತಲುಪುತ್ತಿರುವಂತೆಯೇ, ಶ್ರೀವಾರಿ ದರುಶನಾಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗತೊಡಗಿದ್ದು, ಬ್ರಹ್ಮೋತ್ಸವದ ಎಂಟನೇ ದಿನವಾದ ಶನಿವಾರ ಬೆಳಿಗ್ಗೆ ಶ್ರೀ ವೆಂಕಟರಮಣ ದೇವರನ್ನು ಶ್ರೀರಥದಲ್ಲಿ ಆಸೀನರಾಗಿಸಿ ಭವ್ಯ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ಮೆರವಣಿಗೆಯನ್ನು ವೀಕ್ಷಿಸಿದವರು ಪುನರ್‌ಜನ್ಮ ಪಡೆಯುವುದಿಲ್ಲ, ಸ್ವರ್ಗಪ್ರಾಪ್ತಿಯಾಗಿಸಿಕೊಂಡು ಮೋಕ್ಷ ಹೊಂದುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿ ಮನೆಮಾಡಿದೆ.

ರಾತ್ರಿ ಉಯ್ಯಾಲೆ ಸೇವೆಯ ಬಳಿಕ ಶ್ರೀದೇವರನ್ನು ನಾಲ್ಕು ಕುದುರೆಗಳುಳ್ಳ ರಥದಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಗುತ್ತದೆ.

WD
ಅಶ್ವವು ವೇಗದ ಸಂಚಾರದ ಪ್ರತೀಕ. ಕ್ಷೀರಸಾಗರ ಮಂಥನದ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ಜೊತೆಯಲ್ಲಿ ಅಶ್ವ, ಐರಾವತ, ಅಮೃತ ಉತ್ಪತ್ತಿಯಾದವು ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ.

ನಾಳೆ ಪಲ್ಲಕ್ಕಿ ಉತ್ಸವ, ಚಕ್ರಸ್ನಾನ, ಧ್ವಜಾವರೋಹಣ

WD
ಬ್ರಹ್ಮೋತ್ಸವದ ಕೊನೆಯ ದಿನವಾದ ಭಾನುವಾರ, ಉಷಃಕಾಲದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಚಕ್ರಸ್ನಾನ ವಿಧಿಗಳು ನಡೆಯಲಿವೆ.

ಮೆರವಣಿಗೆಯಲ್ಲಿ ಮೂರ್ತಿಗಳಿಗೆ ತೈಲ, ಸುಗಂಧ ದ್ರವ್ಯಗಳನ್ನು ಲೇಪಿಸುವುದಲ್ಲದೆ ಅಭೀಷೇಕ ಕಾರ್ಯಕ್ರಮಗಳು ನಡೆಯುತ್ತವೆ. ಸ್ವಾಮಿ ಪುಷ್ಕರಿಣಿಯಲ್ಲಿ ಸುದರ್ಶನ ಚಕ್ರಕ್ಕೆ ಸ್ನಾನ ಮಾಡಿಸಲಾಗುತ್ತದೆ.

ಭಾನುವಾರ ಸಂಜೆ ಬಂಗಾರು ತಿರುಚ್ಚಿ ಉತ್ಸವ ನಡೆದು ಧ್ವಜಾವರೋಹಣರೋಹಣದೊಂದಿಗೆ ವೈಭವದ ಉತ್ಸವ ವಿಧಿಗಳಿಗೆ ತೆರೆ ಬೀಳುತ್ತದೆ.