ದರ್ಬಾರು...ಸಿಂಹಾಸನಕ್ಕೊಂದು ಇತಿಹಾಸ

NRB
ಮೈಸೂರು ರಾಜರ ರತ್ನ ಖಚಿತ ಸಿಂಹಾಸನಕ್ಕೊಂದು ಇತಿಹಾಸವಿದೆ. ಇದು ವಿಶ್ವ ವಿಖ್ಯಾತ ದಸರಾ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಲಭ್ಯ.

ಇದನ್ನು ದಂತ, ಚಿನ್ನ, ಕರಿಮರ, ಹಾಗೂ ಬೆಳ್ಳಿಯಿಂದ ನಿರ್ಮಿಸಲಾಗಿದೆ. ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಖಾಸಗಿ ದರ್ಬಾರಿನ ಆರಂಭದಲ್ಲಿ ಇದಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಪುರಾಣ ಏನೆನ್ನುತ್ತದೆ?: ಈ ಸಿಂಹಾಸನದ ಬಗ್ಗೆ ಪೌರಾಣಿಕ ಹಿನ್ನೆಲೆಯೂ ಇದೆ. ಇದು ಬಹಳ ಹಿಂದೆ ಹಸ್ತಿನಾವತಿಯ ಪಾಂಡವರ ವಶದಲ್ಲಿತ್ತು ಎಂದು ತಿಳಿದುಬರುತ್ತದೆ.

ಈ ಸಿಂಹಾಸನ ಚಿನ್ನದ ಮಾವಿನ ಎಲೆ ಹಾಗೂ ಬಾಳೆಯ ಕಂಬದಿಂದ ಅಲಂಕರಿಸಲ್ಪಟ್ಟಿರುವುದು ವಿಶೇಷ. ಸಿಂಹಾಸನದ ಮೇಲ್ಭಾಗದಲ್ಲಿ ದೊಡ್ಡದಾದ ಛತ್ರಿಯಿದ್ದು ಅದರಲ್ಲಿ ಒಡವೆಗಳಿಂದ ಅಲಂಕರಿಸಲ್ಪಟ್ಟ ಪಕ್ಷಿಯನ್ನು ಬಿಂಬಿಸಲಾಗಿದೆ. ಈ ಸಿಂಹಾಸನದಲ್ಲಿ ಕೂರ್ಮರೂಪದ ಆಸನವಿದ್ದು ಉಭಯ ಪಾರ್ಶ್ವದಲ್ಲೂ ಯಾಳಿಗಳು, ನಾಲ್ಕುಕಡೆಗಳಲ್ಲಿ ಬಳ್ಳಿ, ಲತೆಗಳನ್ನು ಹರಡಲಾಗಿದೆ.

ನಾಗದೇವತೆಗಳನ್ನು ಪ್ರತಿನಿಧಿಸುವಂತೆ ಸೂಚಿಸುವ ಚಿತ್ರಗಳು ಸಿಂಹಾಸನದ ಸೌಂದರ್ಯವನ್ನು ಹೆಚ್ಚಿಸಿವೆ.

ವೆಬ್ದುನಿಯಾವನ್ನು ಓದಿ