ಜಿಲೇಬಿ

WD
ಬೇಕಾಗುವ ಸಾಮಾಗ್ರಿಗಳು:

ಉದ್ದಿನ ಬೇಳೆ- 500 ಗ್ರಾಂ
ಸಕ್ಕರೆ-1 ಕೆಜಿ
ತೆಂಗಿನೆಣ್ಣೆ-1 ಲೀ
ನೀರು- 1 ಲೀಟರ್
ಜಲೇಬಿ ಬಣ್ಣ(ಕೇಸರಿ ಅಥವಾ ಹಳದಿ)- 5 ಹನಿ
ಉಪ್ಪು-ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾ

ಉದ್ದಿನ ಬೇಳೆಯನ್ನು ನಯವಾಗಿ ಹುಡಿಮಾಡಿ ನೀರಿನೊಂದಿಗೆ ಬೆರಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ದಪ್ಪವಾಗಿ ಅಂಟು ಬರುವಂತೆ ಹಿಟ್ಟನ್ನು ತಯಾರಿಸಿ.
ಇನ್ನೊಂದು ಪಾತ್ರೆಯಲ್ಲಿ ನೀರಿಗೆ ಸಕ್ಕರೆಯನ್ನು ಸೇರಿಸಿ ಕುದಿಸಿ. ಅದಕ್ಕೆ ಐದು ಹನಿ ಬಣ್ಣವನ್ನು ಸೇರಿಸಿ ಕದಡಿಸಿ. ಸಕ್ಕರೆಯ ಪಾನಕವು ಮಂದವಾದಾಗ ಒಲೆಯಿಂದ ಕೆಳಗಿಳಿಸಿ.

ಅಗಲವಾದ ಪಾತ್ರೆಯಲ್ಲಿ ತೆಂಗಿನೆಣ್ಣೆಯನ್ನು ಕುದಿಸಿ ಅದಕ್ಕೆ ದಪ್ಪವಾದ ಹಿಟ್ಟನ್ನು ತೆಳುವಾದ ಬಟ್ಟೆಯನ್ನು ಬಳಸಿ ನಿಧಾನವಾಗಿ ಸುರಿಯುರಿ. ಹಿಟ್ಟನ್ನು ಸುರಿಯುವಾಗ ಒಂದರಮೇಲೊಂದು ಚಕ್ರಗಳ ಆಕಾರದಲ್ಲಿ ಆಕೃತಿಯನ್ನು ಬರುವಂತೆ ಮಾಡಿ ಹೆಚ್ಚಾಗಿ ಹುರಿಯದಂತೆ ಜಾಗ್ರತೆ ವಹಿಸಿ,ಹಾಗೂ ಅದು ಮೃದುವಾಗಿರುವಾಗಲೇ ಎಣ್ಣೆಯಿಂದ ಹೊರತೆಗೆಯಿರಿ.

ಎಣ್ಣೆ ಚೆನ್ನಾಗಿ ಆರಿದ ನಂತರ ಜಲೇಬಿಗಳನ್ನು ಬಿಸಿಯಾದ ಸಕ್ಕರೆ ಪಾನಕಕ್ಕೆ ಹಾಕಿ. ಹದಿನೈದು ನಿಮಿಷಗಳ ನಂತರ ಜಲೇಬಿಯು ಸಕ್ಕರೆಪಾನಕವನ್ನು ಚೆನ್ನಾಗಿ ಹೀರಿಕೊಂಡ ನಂತರ ಹೊರ ತೆಗೆಯಿರಿ.

ವೆಬ್ದುನಿಯಾವನ್ನು ಓದಿ