ಹಾಲಿನ ಬರ್ಫಿ

ಬೇಕಾಗುವ ಸಾಮಾಗ್ರಿಗಳು:

ಹಾಲು- 2 ಲೀಟರ್
ಸಕ್ಕರೆ-3/4 ಕಪ್
ಗೋಡಂಬಿ- 5
ಪಿಸ್ತಾ,ಬಾದಾಮಿ- 5
ಅರ್ಧ ಟೀ ಚಮಚ ನಿಂಬೆರಸವನ್ನುಅರ್ಧ ಕಪ್ ನೀರಿನಲ್ಲಿ ಕಲಸಿ ಮಾಡಿದ ದ್ರಾವಣ
ಸಿಲ್ವರ್(ಬೆಳ್ಳಿ)ಹಾಳೆ- ಅಗತ್ಯವಿದ್ದರೆ ಮಾತ್ರ

ತಯಾರಿಸುವ ವಿಧಾನ:

ಒಂದು ಲೀಟರ್ ಹಾಲನ್ನು ಚೆನ್ನಾಗಿ ಕುದಿಸಿ ಅದಕ್ಕೆ ನಿಂಬೆರಸದ ದ್ರಾವಕವನ್ನು ಸೇರಿಸಿ ಒಲೆಯಿಂದ ಹೊರತೆಗೆಯಿರಿ. ನಂತರ ಅದನ್ನು ಬಟ್ಟೆಯಿಂದ ಸೋಸಿ ಹೆಚ್ಚಿಗೆಯಿರುವ ನೀರನ್ನು ತೆಗೆಯಿರಿ .ತದನಂತರ ಬಟ್ಟೆಯಲ್ಲಿ ಉಳಿದಿರುವ ದಪ್ಪ ಹಾಲಿನ ಕೆನೆಯನ್ನು ಪಾತ್ರೆಯಲ್ಲಿ ಸಂಗ್ರಹಿಸಿಡಿ.

ಉಳಿದಿರುವ ಒಂದು ಲೀಟರ್ ಹಾಲನ್ನು ಅದು ಅರ್ಧದಷ್ಟಾಗುವ ತನಕ ಕುದಿಸಿ. ಸೋಸಿ ಉಳಿದಿರುವ ದಪ್ಪದ ಹಾಲಿನ ಕೆನೆಯನ್ನು ಕುದಿಯುತ್ತಿರುವ ಹಾಲಿಗೆ ಹಾಕಿ ದಪ್ಪವಾಗುವ ವರೆಗೆ ಚೆನ್ನಾಗಿ ಕದಡಿಸಿ. ಇದಕ್ಕೆ ಸಕ್ಕರೆಯನ್ನು ಸೇರಿಸಿ ಮತ್ತಷ್ಟು ದಪ್ಪವಾಗುವವರೆಗೂ ಕದಡಿಸುತ್ತಾ ಬೇಯಿಸುತ್ತಿರಿ.

ದಪ್ಪವಾದ ನಂತರ ಒಲೆಯಿಂದ ಕೆಳಗಿಳಿಸಿ ಅಗಲವಾದ ಟ್ರೇಯಲ್ಲಿ ಹರಡಿ. ಅನಂತರ ಅದರ ಮೇಲೆ ಸಿಲ್ವರ್ ಹಾಳೆಗಳನ್ನು ಹರಡಿ ಪಿಸ್ತಾ, ಬಾದಾಮಿ ಮತ್ತು ಗೋಡಂಬಿಗಳನ್ನು ಅಲಂಕೃತವಾಗಿರಿಸಿ ನಿಮಗಿಷ್ಟವಾದ ಆಕೃತಿಗೆ ಕತ್ತರಿಸಿ.

ವೆಬ್ದುನಿಯಾವನ್ನು ಓದಿ