ರಾಹುಲ್ ಭೇಟಿ: ಕಾಂಗ್ರೆಸ್ ಚೈತನ್ಯ

PTI
ತನ್ನ ಭಾರತ ತಿಳಿ ಕಾರ್ಯಕ್ರಮದಂಗವಾಗಿ ರಾಜ್ಯದ ಗ್ರಾಮಗಳಿಗೆ ರಾಹುಲ್ ಗಾಂಧಿ ಭೇಟಿ ಮಾಡಿ ಬಡವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ಚೈತನ್ಯ ಮೂಡಿಸಿದೆ. ಈ ಕಾರ್ಯವು ಜನಮಾನಸದಲ್ಲಿ ಉಳಿಯುವಂತದ್ದು ಎನ್ನುತ್ತಿರುವ ಕಾಂಗ್ರೆಸಿಗರು, ರಾಜ್ಯಾದ್ಯಂತ ರಾಹುಲ್ ಗಾಳಿ ಜೋರಾಗಿ ಬೀಸಿದೆ ಎಂಬ ಲೆಕ್ಕಚಾರ ಹಾಕಿವೆ. ಇದನ್ನು ಹೇಗೆ ಮುಂದುವರೆಸಿಕೊಂಡು ಹೋಗಬೇಕೆನ್ನುವುದು ಈಗ ಕಾಂಗ್ರೆಸ್ ಎದುರಿರುವ ಪ್ರಶ್ನೆ.

ರಾಜ್ಯದಲ್ಲಿ ಶೀಘ್ರ ಚುನಾವಣೆ ಎಂದು ಚುನಾವಣಾ ಆಯೋಗ ಘೋಷಿಸುತ್ತಿದ್ದಂತೆ, ಇದನ್ನು ಮುಂದೂಡುವ ಪ್ರಯತ್ನಕ್ಕೆ ಕೈ ಹಾಕಿ ಕಾಂಗ್ರೆಸ್ ಪಕ್ಷ ವಿಫಲವಾಗಿತ್ತು. ಅದೇ ಸಂದರ್ಭದಲ್ಲಿ ರಾಹುಲ್ ರಾಜ್ಯ ಪ್ರವಾಸ ಸ್ವಲ್ಪ ಮಟ್ಟಿಗೆ ಕಾಂಗ್ರೆಸ್ನಲ್ಲಿ ಲವಲವಿಕೆ ಮೂಡಿಸಿದೆ. ರಾಜ್ಯದಲ್ಲಿ ರಾಹುಲ್ ಬಂದು ರಾಜ್ಯಾದ್ಯಂತ ಪ್ರವಾಸ ಮಾಡಿದ್ದು, ಕಾಂಗ್ರೆಸ್ಸಿಗರಲ್ಲಿ ಎಲ್ಲಿಲ್ಲದ ಉತ್ಸಾಹ ಮೂಡಿದೆ. ಅಲ್ಲದೆ, ರಾಜ್ಯ ನಾಯಕರನ್ನು ಒಟ್ಟುಗೂಡಿಸುವಲ್ಲಿ ರಾಹುಲ್ ಪಾತ್ರ ಮಹತ್ವದ್ದಾಗಿದೆ ಎಂದರೂ ತಪ್ಪಿಲ್ಲ.

ತನ್ನ ಪ್ರವಾಸ ಮುಗಿಸಿ ರಾಹುಲ್ ತೆರಳುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಮುಖಂಡರು ಸಭೆ ನಡೆಸಿ ಮುಂದಿನ ಕಾರ್ಯ ಯೋಜನೆ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೆ, ತಮ್ಮೊಳಗಿನ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಚುನಾವಣೆ ಗೆಲ್ಲುವುದೇ ಪಕ್ಷದ ಮುಂದಿರುವ ಬಹುದೊಡ್ಡ ಸವಾಲೆಂದು ಕಾಂಗ್ರೆಸ್ ನಾಯಕರಿಗೆ ಮನದಟ್ಟಾಗಿದೆ.

ವೆಬ್ದುನಿಯಾವನ್ನು ಓದಿ