ಇದುವರೆಗೆ ಐವರು ಭಾರತೀಯರಿಗೆ ಆಸ್ಕರ್

ಸೋಮವಾರ, 23 ಫೆಬ್ರವರಿ 2009 (17:49 IST)
ಆಸ್ಕರ್ ಪ್ರಶಸ್ತಿಯ ವಾಸನೆ ಭಾರತಕ್ಕೆ ಹೊಸದೇನಲ್ಲ. 1982ರಲ್ಲೇ ಭಾರತೀಯರೊಬ್ಬರು ಆಸ್ಕರ್ ಪ್ರಶಸ್ತಿ ಪಡೆದಿದ್ದರು. ಅದು ರಿಚರ್ಡ್ ಅಟೆನ್‌ಬರೋ ಅವರ 'ಗಾಂಧಿ' ಚಿತ್ರದ ವಸ್ತ್ರವಿನ್ಯಾಸಕ್ಕಾಗಿ. ಅದನ್ನು ಪಡೆದದ್ದು ಭಾನು ಅತೈಯಾ ಎಂಬ ವಸ್ತ್ರ ವಿನ್ಯಾಸಕಾರ.

ಆನಂತರ ಸತ್ಯಜಿತ್ ರಾಯ್ ಅವರು ಅವರಿಗೆ ಜೀವಮಾನದ ಸಾಧನೆಗಾಗಿ ವಿಶೇಷ ಆಸ್ಕರ್ ಗೌರವ ಪ್ರಶಸ್ತಿ ಲಭಿಸಿತ್ತು. ಇದು 1992ರಲ್ಲಿ.

ಇದೀಗ ಇನ್ನೂ ಮೂವರು ಭಾರತೀಯರು ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎ.ಆರ್.ರೆಹಮಾನ್‌ಗೆ ಸ್ಲಂ ಡಾಗ್ ಮಿಲಿಯನೇರ್‌ನಲ್ಲಿ ಮೂಲ ಸಂಗೀತ ಮತ್ತು 'ಜೈ ಹೋ' ಮೂಲ ಗೀತೆಗಾಗಿ ಅವಳಿ ಆಸ್ಕರ್.

ಅದೇ ಚಿತ್ರದ 'ಜೈ ಹೋ' ಗೀತೆಗಾಗಿ ರಹಮಾನ್ ಜೊತೆ ಆಸ್ಕರ್ ಹಂಚಿಕೊಂಡವರೆಂದರೆ ಗೀತೆ ರಚನೆಕಾರ ಗುಲ್ಜಾರ್.

ಕೊನೆಯದಾಗಿ, ಸ್ಲಂ ಡಾಗ್ ಚಿತ್ರದ ಅತ್ಯುತ್ತಮ ಸೌಂಡ್ ಮಿಕ್ಸಿಂಗ್‌ಗಾಗಿ ಕೇರಳದ ರೆಸೂಲ್ ಪೂಕುಟ್ಟಿ ಅವರಿಗೆ ಆಸ್ಕರ್ ಗರಿ.

ಆದರೆ, ಭಾರತೀಯರೇ ನಿರ್ಮಿಸಿ, ನಿರ್ದೇಶಿಸಿದ ಸಂಪೂರ್ಣ ಭಾರತೀಯ ಚಿತ್ರಕ್ಕೆ ಇದುವರೆಗೆ ಆಸ್ಕರ್ ಒಲಿದಿಲ್ಲ ಎಂಬುದು ಅಷ್ಚೇ ಕಟು ಸತ್ಯ.

ವೆಬ್ದುನಿಯಾವನ್ನು ಓದಿ