ಕವನ: ಪ್ರೇಮದ ಹೂ ಮಳೆ

ಎಸ್.ಎಲ್.ಸುರೇಂದ್ರ ಕುಮಾರ

ಮಳೆ ಮಳೆ ಹೂ ಮಳೆ ಸುರಿಯಿತು
ಸುರಿಯಿತು ನನ್ನ ಎದೆಯ ಗೂಡೊಳಗೆ
ಮನಸಿನ ಮೋಹದ ಮೋಡದಿ0ದ
ಕಲ್ಪನೆ ರೂಪದ ಕನಸಿನಿ0ದ.

ತೊಯ್ದುಹೋದೆ ನಾನು ನನ್ನೊಳಗೆ
ನಿನ್ನ ರೂಪ ರಾಶಿಯಿ0ದ
ತೇಲಿಬ0ದೆ ನಾನು ನಿನ್ನೆಡೆಗೆ
ನಿನ್ನ ದಿವ್ಯ ಸ್ಪರ್ಶದಿ0ದ.

ಢವ ಢವ ಎದೆಯ ಬಡಿತ
ಸರಿ ಗಮ ಪದ ನಿಸ
ಸ0ಗೀತದ ಅಲೆಯ ಸೆಳೆತ
ಸನಿ ದಪ ಮಗ ರಿಸ.

ಗೆಳತಿ ನಮ್ಮ ಪ್ರೇಮದ ಒಡತಿ
ಮೀಯೋಣ ಬಾ ಪ್ರೀತಿ ಸಾಗರದಲಿ
ಜೀಗೋಣ ಬಾ ಪ್ರೇಮದುಯ್ಯಾಲೆಯಲಿ
ಸರಸ ಹುಸಿ ವಿರಸ ಎಲ್ಲ ಇದರೊಳಗಿರಲಿ.

ವೆಬ್ದುನಿಯಾವನ್ನು ಓದಿ