ಗಣೇಶನ ವಿಶ್ವರೂಪ

ಬುಧವಾರ, 2 ಜನವರಿ 2008 (15:15 IST)
NEWS ROOM
ಇದನ್ನು ಲಕ್ ಎನ್ನುತ್ತಿರೋ, ಪ್ರತಿಭೆಗೆ ತಕ್ಕ ಫಲ ಎನ್ನುತ್ತಿರೋ ಗೊತ್ತಿಲ್ಲ. ಆದರೆ 2007ರಲ್ಲಿ ಗೆದ್ದಿದ್ದು ಅಲ್ಲ ಜಯಭೇರಿ ಬಾರಿಸಿದ್ದಂತೂ ಕಾಮಿಡಿ ಟೈಮ್ ಖ್ಯಾತಿಯ ಗೋಲ್ಡ್ ಸ್ಟಾರ್ ಗಣೇಶ್‌ನ ಇಮೇಜನ್ನು ಇಮ್ಮಡಿಗೊಳಿಸಿದೆ.

ಇವರು ಒಂದು ಚಿತ್ರದಲ್ಲಿ ನಾಯಕನಾದಾಗ ಈ ಮಟ್ಟಕ್ಕೆ ಬೆಳೆಯುತ್ತಾನೆ ಎಂದು ಯಾರೂ ನೀರೀಕ್ಷಿಸಿರಲಿಲ್ಲ. ಕಳೆದ 2006ರ ಕೊನೆಗೆ ಮುಂಗಾರು ಮಳೆ ಅವರ ಯಶಸ್ಸಿಗೆ ಮುನ್ನುಡಿ ಬರೆದಿತ್ತು. ನಂತರ 2007ರಲ್ಲಿ ಬಂದ ಚಿತ್ರಗಳಾದ ಚೆಲುವಿನ ಚಿತ್ತಾರ,ಹುಡುಗಾಟ, ಕೃಷ್ಣ ಚಿತ್ರಗಳು ಸತತ ಯಶಸ್ಸಿನಿಂದ ನಿಜವಾಗಲೂ ಗಣೇಶ್ ಗೋಲ್ಡನ್ ಸ್ಟಾರ್ ಆದರು.

ಈ ನಾಲ್ಕು ಚಿತ್ರಗಳ ಬಿಸಿನೆಸ್ ನೂರು ಕೋಟಿ ರೂ. ಮೀರಿದೆ ಎಂದು ಗಾಂಧೀನಗರ ಅಂದಾಜು ಮಾಡಿದೆ. ಒಂದು ಸಿನೆಮಾ ಗೆಲ್ಲಬೇಕಾದರೆ ಇಡೀ ಚಿತ್ರತಂಡದ ಶ್ರಮದ ಪ್ರತಿಫಲ ಎಂದು ಹೇಳಲಾಗುತ್ತದೆ. ಆದರೆ ಸಾಮಾನ್ಯ ಪ್ರೇಕ್ಷಕನಿಗೆ ಅವೆಲ್ಲವೂ ಗೊತ್ತಿರುವುದಿಲ್ಲ. ಅವರಿಗೆ ಕಾಣುವುದು ಹೀರೋ ಹಾಗೂ ಹೀರೋಯಿನ್ ಮಾತ್ರ.

ನಿರ್ದೇಶಕ, ಛಾಯಾಗ್ರಾಹಕ, ಸಂಗೀತ ನಿರ್ದೇಶಕ ಹೆಸರೂ ಒಮ್ಮೊಮ್ಮೆ ಗೊತ್ತಿರುವುದಿಲ್ಲ. ಬೇಡಿಕೆ ಮತ್ತು ಜನಪ್ರಿಯತೆಯಲ್ಲಿ ಸಮತೋಲನ ಕಾಪಾಡಿಕೊಂಡು ಗಣೇಶ್ ಇನ್ನಷ್ಟು ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಹಾರೈಸೋಣ.

ವೆಬ್ದುನಿಯಾವನ್ನು ಓದಿ