2007ರಲ್ಲಿ ಮಹಿಳಾಮಣಿಗಳು ನಿರ್ದೇಶಕರಾಗಿ ಪಾದಾರ್ಪಣೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ವಿಜಯಲಕ್ಷ್ಮಿ ಸಿಂಗ್ ಅವರು ಕುಟುಂಬ ಸದಸ್ಯರೆಲ್ಲರೂ ಕುಳಿತು ನೋಡಬಹುದಾದಈ ಬಂಧನ ರೂಪಿಸುವ ಮೂಲಕ ತಮ್ಮ ನಿರ್ದೇಶಕ ಪ್ರತಿಭೆ ತೋರಿದ್ದಾರೆ.
ಈ ವರ್ಷ ಸಾಕಷ್ಟು ಸಂಖ್ಯೆಯ ನಿರ್ದೇಶಕರು ಸೋತಿದ್ದಾರೆ. ಸಾಯಿಪ್ರಕಾಶ್ ನಿರ್ದೇಶನಕದ ಐದು ಚಿತ್ರಗಳ ಪೈಕಿ ನಾಲ್ಕು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತಿವೆ. ಒಂದರ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ. ಎಸ್.ನಾರಾಯಣ್ ಶೇ. 50ರಷ್ಟು ಗೆದ್ದಿದ್ದಾರೆ.
ಪ್ರತಿಭಾವಂತ ನಿರ್ದೇಶಕ ಎಂದು ಹೆಸರು ಗಳಿಸಿರುವ ದಿನೇಶ್‌ಬಾಬು ಅವರ ತ್ರಿಶಂಕು ಸ್ಥಿತಿ ಮುಂದುವರಿದಿದೆ. ಬುದ್ದಿಜೀವಿ ನಿರ್ದೇಶಕರು ಎಂದು ಹೆಸರು ಗಳಿಸಿರುವ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಟಿ.ಎನ್.ಸೀತಾರಾಂ ಚಿತ್ರಗಳು ಅನೀರೀಕ್ಷಿತ ಸೋಲು ಅನುಭವಿಸಿವೆ.
ನಟ ರಮೇಶ್ ಸತ್ಯವಾನ್ ಸಾವಿತ್ರಿ ಚಿತ್ರದ ಮೂಲಕ ಪಕ್ಕಾ ನಿರ್ದೇಶಕರಾಗಿ ಮಾರ್ಪಟ್ಟಿದ್ದಾರೆ. ಅವರನ್ನು ನಿರ್ಮಾಪಕರು ಇನ್ನು ಮುಂದೆ ತಮ್ಮ ಚಿತ್ರಗಳ ನಿರ್ದೇಶಕರಾಗಿ ಆಯ್ಕೆ ಮಾಡಬಹುದಾಗಿದೆ.