ವಿಷ್ಣು 8 ನೇ ಅವತಾರಕ್ಕೆ ಕೃಷ್ಣ ಎಂಬ ಹೆಸರು ಯಾಕಿಟ್ಟರು ಗೊತ್ತಾ?

ಮಂಗಳವಾರ, 10 ಜುಲೈ 2018 (07:36 IST)
ಬೆಂಗಳೂರು : ಶ್ರೀವಿಷ್ಣು ಲೋಕದಲ್ಲಿ ಅಧರ್ಮ ತಾಂಡವಾಡುವಾಗ ಅದನ್ನು ತಡೆಯಲು ಹೊಸ ಹೊಸ ಅವತಾರವನ್ನು ಎತ್ತುತ್ತಾನೆ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗೇ ವಿಷ್ಣು 8 ನೇ ಅವತಾರವಾದ ಶ್ರೀಕೃಷ್ಣನ ಅವತಾರವೆತ್ತಿ ತನ್ನ ದುಷ್ಟ ಸೋದರಮಾವನಾದ  ಕಂಸನನ್ನು ಸಂಹರಿಸುತ್ತಾನೆ. ಆದರೆ ವಿಷ್ಣುವಿನ 8 ನೇ ಅವತಾರಕ್ಕೆ ಕೃಷ್ಣ ಎಂಬ ಹೆಸರು ಯಾಕಿಟ್ಟರು ಎಂಬುದು ಗೊತ್ತಾ.


ಪ್ರಸಿದ್ಧ ಋಷಿಮುನಿ ಆಚಾರ್ಯ ಗಾರ್ಗ್ ಹೇಳುವ ಪ್ರಕಾರ ಈ ಹಿಂದೆ ವಿಷ್ಣು ಭೂಮಿಯ ಮೇಲೆ ಧರ್ಮವನ್ನು ಕಾಪಾಡಲು ಅವತಾರವನ್ನು ಎತ್ತಿದಾಗ ಬಿಳಿ, ಕೆಂಪು ಮತ್ತು ಹಳದಿ ಬಣ್ಣಗಳನ್ನು ತೆಗೆದುಕೊಂಡಿದ್ದಾನೆ. ಈ ಬಾರಿ ಕಪ್ಪು ಬಣ್ಣವನ್ನು ಹೊಂದುತ್ತಾನೆ. ಹಾಗಾಗಿ ಈ ಮಗುವಿಗೆ ಕೃಷ್ಣ ಎಂದು ಸೂಚಿಸಿದರು. ಆದ್ದರಿಂದಲೇ ವಿಷ್ಣುವಿನ ಹೆಸರಿನೊಂದಿಗೆ ಜನಪ್ರಿಯ ಅವತಾರಕ್ಕೆ ಶ್ರೀಕೃಷ್ಣ ಎನ್ನುವ ಹೆಸರು ಬಂತು ಎನ್ನಲಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ