ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ತಿರುಪತಿಗೆ ಹೋದಷ್ಟೇ ಪುಣ್ಯ ಲಭಿಸುತ್ತದೆಯಂತೆ.

ಶನಿವಾರ, 11 ಮೇ 2019 (07:43 IST)
ಬೆಂಗಳೂರು : ಪ್ರಸಿದ್ಧ ದೇವಾಲಯವಾದ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಜೀವನದಲ್ಲಿ ಒಂದು ಬಾರಿಯಾದರೂ ಹೋಗಬೇಕು ಎಂದು ಬಯಸುವವರಿಗೆ ಹೋಗಲು ಸಾಧ್ಯವಾಗದಿದ್ದರೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ. ಇದರಿಂದ ತಿರುಪತಿಗೆ ಹೋದಷ್ಟೇ ಪುಣ್ಯ ಲಭಿಸುತ್ತದೆಯಂತೆ.

 



ಬೆಂಗಳೂರಿನಿಂದ 50 ಕಿ.ಮೀ. ದೂರದಲ್ಲಿರುವ ಬೆಂಗಳೂರು  ಗ್ರಾಮಾಂತರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿರುವ  ಸ್ವರ್ಣಾದ್ರಿಗಿರಿ ತಿರುಮಲೆಯಲ್ಲಿರುವ ವೇಂಕಟೇಶ್ವರ ಸ್ವಾಮಿಯನ್ನು ರಂಗನಾಥಸ್ವಾಮಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ತಿರುಪತಿಗೆ ಹೋಗಲಾಗದವರು ಈ ಕ್ಷೇತ್ರದಲ್ಲಿರುವ ವೇಂಕಟೇಶ್ವರ ಸ್ವಾಮಿಯನ್ನು ಆರಾಧಿಸಿದರೆ ಇಷ್ಟಾರ್ಥ ಫಲ ಸಿಗುವುದೆಂಬ ನಂಬಿಕೆ.


ಮಾಂಡವ್ಯ, ಕಣ್ವ, ವಶಿಷ್ಠ, ಪುರಂಜಯ, ಪ್ರಹ್ಲಾದ ಮುಂತಾದವರ ತಪೋ ಕ್ಷೇತ್ರವಾಗಿದ್ದು, ತಿರುಪತಿ ಶ್ರೀನಿವಾಸನ ಆಜ್ನೆಯಂತೆ ಮಾಂಡವ್ಯ ಋಷಿಗಳು ತಿರುಮಲೆಯ ಸ್ವರ್ಣಾದ್ರಿ ಕ್ಷೇತ್ರದಲ್ಲಿ ಕುಟೀರವನ್ನು ಕಟ್ಟಿಕೊಂಡು ತಪಸ್ಸು ಮಾಡಿದ್ದರು. ಅಲ್ಲದೇ ಮಾಂಡವ್ಯ ಋಷಿಗಳಿಗೆ ಶ್ರೀನಿವಾಸ ದೇವರು ಕಾಣಿಸಿಕೊಂಡು ಉದ್ಭವ ಸಾಲಿಗ್ರಾಮ ರೂಪದಲ್ಲಿರುವ ನನ್ನನ್ನು ನಿತ್ಯವೂ ಆರಾಧಿಸಿದರೆ ಇಷ್ಟಾರ್ಥ ಸಿದ್ಧಿಯಾಗಿ ಮೋಕ್ಷ ಲಭಿಸುತ್ತದೆ ಎಂದು ಹೇಳಿದನಂತೆ. ಮಾಂಡವ್ಯ ಋಷಿಗಳು ತಪಸ್ಸನ್ನಾಚರಿಸಿದ ಕ್ಷೇತ್ರವಾದ್ದರಿಂದ ಇಲ್ಲಿರುವ ದೇವರನ್ನು ಮಾಂಡವ್ಯನಾಥನೆಂಬುದಾಗಿ ಕೂಡ ಕರೆಯುತ್ತಾರೆ.


ದೇವಾಲಯದಲ್ಲಿರುವ ಉದ್ಭವ ಸಾಲಿಗ್ರಾಮಕ್ಕೆ ಎಷ್ಟೇ ನೀರಿನಿಂದ ಅಭಿಷೇಕ ಮಾಡಿದರೂ ಅದು ಒಂದು ಹನಿಯೂ ಇರದಂತೆ ಇಂಗಿ ಹೋಗುವುದು ಈ ಕ್ಷೇತ್ರದ ಮತ್ತೊಂದು ಮಹಿಮೆಯಾಗಿದೆ. ಪ್ರತಿ ನಿತ್ಯ ತಿರುಪ್ಪವೈ ನಲ್ಲಿನ ಒಂದೊಂದು ಪಾಶುರಗಳ ಪಾರಾಯಣ ಆಂಡಾಳ್ ತಾಯಿಯ ಸಮ್ಮುಖದಲ್ಲಿ ಶ್ರೀರಂಗನಾಥಸ್ವಾಮಿಯ ಪಾದಕಮಲಗಳಿಗೆ ಅರ್ಪಣೆಯಾಗಲಿದೆ. 6ರ ವರೆಗೆ ಶ್ರೀದೇಗುಲ ತೆರೆದಿರುತ್ತದೆ ಪುನಃ 9ಕ್ಕೆ ಶ್ರೀದೇಗುಲ ತೆರೆಯಲಾಗುತ್ತದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ