ಈ ಸಮಸ್ಯೆಗಳಿಗೆ ಕೆಮ್ಮಣ್ಣಿನಲ್ಲಿದೆ ಪರಿಹಾರ

ಶನಿವಾರ, 11 ಮೇ 2019 (07:40 IST)
ಬೆಂಗಳೂರು : ಮಕ್ಕಳು ಮಣ್ಣಿನಲ್ಲಿ ಆಟವಾಡಿದರೆ ಅವರ ಕೈಕಾಲುಗಳಲ್ಲಿ ಗುಳ್ಳೆಗಳು ಆಗುತ್ತದೆ. ಆದ್ದರಿಂದ ಮಕ್ಕಳನ್ನು ಮಣ್ಣಿನಲ್ಲಿ ಆಟವಾಡಲು ಬಿಡಬಾರದು ಎಂದು ಹೇಳುತ್ತಾರೆ. ಆದರೆ ಕೆಮ್ಮಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯಕಾರಿ ಲಾಭಗಳಿವೆ ಎನ್ನಲಾಗಿದೆ.



ನಿಮ್ಮ ಮೈಮೇಲೆ ಸುಟ್ಟ ಕಲೆಗಳಿದ್ದರೆ ತಣ್ಣೀರಿನಲ್ಲಿ ಕೆಮ್ಮಣ್ಣನು ಕಲಸಿ ಚರ್ಮ ಸುಟ್ಟಿರುವ ಜಾಗಕ್ಕೆ ಲೇಪಿಸಿದರೆ ಉರಿ, ನೋವು ಕಡಿಮೆಯಾಗಿ ಗಾಯ ಬೇಗ ಗುಣವಾಗುತ್ತದೆಯಂತೆ. ಮುಖದಲ್ಲಿ ಕಪ್ಪು ಕಲೆಗಳು ಹೆಚ್ಚಾಗಿದ್ದರೆ ಕೆಮ್ಮಣ್ಣಿಗೆ ಮೊಸರು ಮತ್ತು ಪುದೀನಾ ಸೊಪ್ಪನ್ನು ಹಾಕಿ ಕಲಸಿ ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿದರೆ ಕಲೆಗಳು ಶಮನವಾಗುತ್ತದೆಯಂತೆ.

 

ಲೇಪಿಸಿ ಅರ್ಧ ಗಂಟೆ ಬಿಟ್ಟು ಮುಖ ತೊಳೆದರೆ ಚರ್ಮ ಮೃದುವಾಗುತ್ತದೆ. ಕೆಮ್ಮಣ್ಣಿಗೆ ರೋಸ್‌ವಾಟರ್‌ ಬೆರೆಸಿ ಕಣ್ಣಿನ ರೆಪ್ಪೆಗಳ ಮೇಲೆ ಮತ್ತು ಸುತ್ತಲೂ ಹಚ್ಚಿದರೆ ಕಣ್ಣಿನ ನೋವು ಕಡಿಮೆಯಾಗುತ್ತದೆ ಅಲ್ಲದೇ ಮುಖದ ಮೇಲೆ ಮೊಡವೆಗಳಾಗಿದ್ದರೆ ಬೇವಿನ ಪುಡಿ, ಅರಿಶಿನ ಪುಡಿ ಮತ್ತು ಕೆಮ್ಮಣ್ಣನ್ನು ರೋಸ್‌ ವಾಟರ್‌ ಜತೆ ಕಲಸಿ ಮುಖಕ್ಕೆ ಲೇಪಿಸಿದರೆ ಮೊಡವೆಗಳು ನಿವಾರಣೆಯಾಗುತ್ತವೆ. ಮಂಡಿಗಳು ಕೆಂಪಾಗಿ ಊತ, ನೋವಿದ್ದರೆ ಕೆಮ್ಮಣ್ಣಿಗೆ ಮೇಕೆ ಹಾಲನ್ನು ಕಲಸಿ ಪೇಸ್ಟ್‌ ಮಾಡಿ ಮಂಡಿಗಳ ಮೇಲೆ ಲೇಪಿಸಿದರೆ ಕೆಂಪು ಕಡಿಮೆಯಾಗಿ ಊತ, ನೋವು ಶಮನವಾಗುತ್ತದೆ.


 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ