ಒಣಕೆಮ್ಮುನಿಂದ ಮುಕ್ತಿ ಪಡೆಯಲು ಈ ಮನೆಮದ್ದನ್ನು ಬಳಸಿ

ಶುಕ್ರವಾರ, 10 ಮೇ 2019 (09:08 IST)
ಬೆಂಗಳೂರು : ಬೇಸಿಗೆಯಲ್ಲಿ ಹೆಚ್ಚಾಗಿ ಧೂಳಿನಿಂದ ಒಣಕೆಮ್ಮು ಉಂಟಾಗುತ್ತದೆ. ಇದರಿಂದ ಸರಿಯಾಗಿ ಊಟ, ನಿದ್ರೆ ಮಾಡಲು ಆಗುವುದಿಲ್ಲ. ಆದ್ದರಿಂದ ಕೆಮ್ಮು ಆರಂಭವಾದ ಕೂಡಲೇ ಈ ಮನೆ ಮದ್ದನ್ನು ಉಪಯೋಗಿಸಿ ತೊಂದರೆ ನಿವಾರಿಸಿಕೊಳ್ಳಿ.




ಜೀರಿಗೆಯನ್ನು ಚೆನ್ನಾಗಿ ಹುರಿದು ಪುಡಿ ಮಾಡಿಕೊಳ್ಳಿ. ನಂತರ ಅರ್ಧ ಚಮಚ ಜೀರಿಗೆ ಪುಡಿಗೆ ಒಂದು ಚಮಚದಷ್ಟು ತುಪ್ಪವನ್ನು ಹಾಕಿ, ಚೆನ್ನಾಗಿ ಕಲಸಿಕೊಂಡು ದಿನಕ್ಕೆರಡು ಸಲ ಸೇವಿಸಿದರೆ ಕೆಮ್ಮಿನ ಪ್ರಮಾಣ ಕಡಿಮೆಯಾಗುತ್ತದೆ.


ಅಮೃತ ಬಳ್ಳಿಯ ಒಂದು ಎಲೆಯನ್ನು ತೆಗೆದುಕೊಂಡು, ಸ್ವಲ್ಪ (4 ಹರಳು) ಉಪ್ಪಿನ ಕಾಳಿನೊಂದಿಗೆ ದಿನಕ್ಕೆ 3 ರಿಂದ 4 ಸಲ ಜಗಿದರೆ ಕೆಮ್ಮು ಗುಣಮುಖವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ