ಬೆಂಗಳೂರು: ಶುಕ್ರವಾರವೆಂದರೆ ಲಕ್ಷ್ಮೀ ದೇವಿಯ ದಿನವೆಂದೇ ಪರಿಗಣಿತವಾಗಿದೆ. ಈ ದಿನ ಲಕ್ಷ್ಮೀ ದೇವಿಯ ಈ ಐದು ಸರಳ ಮಂತ್ರಗಳನ್ನು ಪಠಿಸಿದರೆ ಉತ್ತಮ.
ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಜೊತೆಗೆ ಸಂಪತ್ತು ವೃದ್ಧಿಯಾಗಬೇಕಾದರೆ ಲಕ್ಷ್ಮೀ ದೇವಿಯ ಅನುಗ್ರಹ ಸದಾ ಇರಬೇಕು. ವಿಶೇಷವಾಗಿ ಶುಕ್ರವಾರದಂದು ಮನೆಯನ್ನು ಒಪ್ಪ ಮಾಡಿ ಮನೆಯ ಮುಂದೆ ರಂಗೋಲಿಯಿಟ್ಟು ಲಕ್ಷ್ಮೀ ಪೂಜೆ ಮಾಡುವುದರಿಂದ ಸಮೃದ್ಧಿಯುಂಟಾಗುತ್ತದೆ. ಲಕ್ಷ್ಮೀ ದೇವಿಯ ಪೂಜೆ ಮಾಡುವಾಗ ಈ ಐದು ಮಂತ್ರಗಳನ್ನು ಪಠಿಸಿ.
ಓಂ ಹ್ರೀಂ ಹ್ರೀಂ ಶ್ರೀ ಲಕ್ಷ್ಮೀ ವಾಸುದೇವಾಯ ನಮಃ: ಇಂದು ನಿಮ್ಮ ಯಾವುದೇ ಕೆಲಸವೂ ನೆರವೇರಬೇಕಾದರೆ ಈ ಮಂತ್ರವನ್ನು ಪಠಿಸಿ ಮುಂದುವರಿಯಿರಿ.
ಓಂ ಶ್ರೀ ಧನಾಯ ನಮಃ: ಹಣಕಾಸಿನ ವಿಚಾರದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಲಕ್ಷ್ಮೀ ದೇವಿಯ ಈ ಸರಳ ಮಂತ್ರದಿಂದ ಪರಿಹಾರ ಸಿಗುತ್ತದೆ.
ಓಂ ಶ್ರೀ ಮಹಾಲಕ್ಷ್ಮೈ ಚ ವಿದ್ಮಹೇ ವಿಷ್ಣು ಪತ್ನೈ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್: ನೆಮ್ಮದಿ, ಸಮೃದ್ಧಿ ವೃದ್ಧಿಯಾಗಬೇಕಾದರೆ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಪಠಿಸಿ.
ಲಕ್ಷ್ಮೀ ನಾರಾಯಣಾಯ ನಮಃ: ದಾಂಪತ್ಯ ಜೀವನದಲ್ಲಿ ಸಾಮರಸ್ಯ, ನೆಮ್ಮದಿಯಿರಬೇಕಾದರೆ ಈ ಮಂತ್ರವನ್ನು ಪಠಿಸಿ.
ಪದ್ಮನೇ ಪದ್ಮ ಪದ್ಮಾಕ್ಷಿ ಪದ್ಮ ಸಂಭವೇ ತನ್ಮೆ ಭಜಸಿ ಪದ್ಮಾಕ್ಷಿ ಯೇನ ಸೌಖ್ಯಂ ಲಾಭಾಮ್ಯಹಂ: ಈ ಮಂತ್ರವನ್ನು 108 ಬಾರಿ ಪಠಿಸುವುದರಿಂದ ಧನ, ಕನಕದ ಜೊತೆಗೆ ನೆಮ್ಮದಿಯೂ ನಿಮ್ಮದಾಗುತ್ತದೆ.