ನವದೆಹಲಿ : ಹಿಂದೂ ಗಳ ಕನಸಾದ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಇಂದು ಅಯೋಧ್ಯೆಯಲ್ಲಿ ನಡೆಯಲಿದ್ದು, ಈ ಭವ್ಯ ಕಟ್ಟಡ ಹೇಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
3 ಅಂತಸ್ತನ ಭವ್ಯ ಮಂದಿರ ನಿರ್ಮಾಣವಾಗಲಿದ್ದು, 161 ಅಡಿ ಎತ್ತರವಿರಲಿದೆ. 3 ಅಲ್ಲ 5 ಗುಮ್ಮಟ ಹೊಂದಿರುವ ಈ ದೇವಸ್ಥಾನದಲ್ಲಿ ಮೂರು ಅಂತಸ್ತಿನಲ್ಲೂ ಸೇರಿ 360 ಕಂಬಗಳು ಇರಲಿವೆ. 80 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮಂದಿರ ನಿರ್ಮಾಣವಾಗಲಿದ್ದು, ಅಷ್ಟ ಭುಜಾಕೃತಿ ಗರ್ಭಗುಡಿ ಆಕಾರದಲ್ಲಿ ದೇಗುಲವಿರಲಿದೆ. ಒಟ್ಟಾರೆ 2023ರ ವೇಳೆಗೆ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ ಎನ್ನಲಾಗಿದೆ.