ಗುಪ್ತಾಂಗದ ಹೇರ್ ರಿಮೂವ್ ಮಾಡಬಹುದೇ?!

ಶುಕ್ರವಾರ, 12 ಜನವರಿ 2018 (08:46 IST)
ಬೆಂಗಳೂರು: ಹೇರ್ ರಿಮೂವಿಂಗ್ ಮಾಡುವವರು ಇದನ್ನು ಗಮನಿಸಲೇಬೇಕು. ಗುಪ್ತಾಂಗದ ಕೂದಲು ಕೀಳುವುದು ತಪ್ಪೇ ಸರಿಯೇ ಎಂಬ ಜಿಜ್ಞಾಸೆಗಳು ನಮ್ಮಲ್ಲಿವೆ. ಗುಪ್ತಾಂಗದ ಕೂದಲು ಶೇವ್ ಮಾಡಿ ಕಿರಿ ಕಿರಿ ಇಲ್ಲ ಎಂದು ನೀವಂದುಕೊಂಡಿದ್ದರೆ ಅದು ತಪ್ಪು ಎನ್ನುವಂತಹ ಹಲವು ಅಂಶಗಳು ಇಲ್ಲಿವೆ ನೋಡಿ.
 

ಗುಪ್ತಾಂಗಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಕೂದಲು ನಮ್ಮ ದೇಹದೊಳಗೆ ಯೋನಿಯ ಮೂಲಕ ವೈರಾಣು ಪ್ರವೇಶಿಸುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ, ಗುಪ್ತಾಂಗಗಳಿಗೆ ನಿರ್ದಿಷ್ಟ ತಾಪಮಾನವನ್ನು ಈ ಕೂದಲುಗಳು ನೈಸರ್ಗಿಕವಾಗಿ ಸೃಷ್ಟಿಸುತ್ತವೆ.

ಕೆಲವೊಮ್ಮೆ ಈ ರೀತಿ ಕೂದಲು ತೆಗೆಯುವುದರಿಂದ ತುರಿಕೆ, ಕೆಂಪಗಾಗುವುದು, ಇತ್ಯಾದಿ ಚರ್ಮದ ಸಮಸ್ಯೆ ಬರುವ ಸಾಧ್ಯತೆಯಿದೆ. ಇದು ಕ್ರಮೇಣ ಸಮಸ್ಯೆ ದೊಡ್ಡದಾಗುತ್ತಾ ಹೋಗಬಹುದು. ಸೆಕ್ಸ್ ಸಂದರ್ಭದಲ್ಲಿ ಉಂಟಾಗುವ ಕಿರಿ ಕಿರಿ, ನೋವಿನಿಂದ ತಪ್ಪಿಸಲು ಕೂದಲು ಸಹಾಯಕ್ಕೆ ಬರಬಹುದು! ಅಷ್ಟೇ ಅಲ್ಲದೆ, ಲೈಂಗಿಕ ರೋಗಗಳ ಸೋಂಕುಗಳೂ ಸುಲಭವಾಗಿ ದೇಹ ಪ್ರವೇಶಿಸಬಹುದು. ಹಾಗಾಗಿ ಕೂದಲು ಟ್ರಿಮ್ ಮಾಡದೇ ಇರುವುದು ಉತ್ತಮ ಎಂದು ತಜ್ಞರೇ ಹೇಳುತ್ತಾರೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ