ಗುಪ್ತಾಂಗವನ್ನು ಶುಚಿಯಾಗಿಟ್ಟುಕೊಳ್ಳುವುದು ಹೇಗೆ?

ಶುಕ್ರವಾರ, 12 ಜನವರಿ 2018 (08:43 IST)
ಬೆಂಗಳೂರು: ಗುಪ್ತಾಂಗದ ಶುಚಿತ್ವ ಎನ್ನುವುದು ತುಂಬಾ ಮುಖ್ಯವಾದ ಅಂಶ. ಇದನ್ನು ಶುಚಿಯಾಗಿಟ್ಟುಕೊಳ್ಳದಿದ್ದರೆ ಹಲವು ಹೇಳಿಕೊಳ್ಳಲಾಗದ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ಹಾಗಿದ್ದರೆ ಗುಪ್ತಾಂಗವನ್ನು ಶುಚಿಯಾಗಿಟ್ಟುಕೊಳ್ಳುವುದು ಹೇಗೆ?
 

ಕಾಂಡೋಮ್ ಬಳಕೆ
ಅಸುರಕ್ಷಿತ ಲೈಂಗಿಕ ಸಂಪಕರ್ಕ ಹಲವು ಲೈಂಗಿಕ ರೋಗಗಳಿಗೆ ದಾರಿಯಾಗಬಹುದು. ಗುಪ್ತಾಂಗದ ತುರಿಕೆ, ಕಜ್ಜಿ ಮುಂತಾದ ಸಮಸ್ಯೆಯಿರುವ ಸಂಗಾತಿ ಜತೆ ಲೈಂಗಿಕ ಸಂಪರ್ಕ ನಡೆಸುವಾಗ ಅದು ಹರಡದಂತೆ ತಡೆಯಲು ಕಾಂಡೋಮ್ ಬಳಸಬಹುದು.

ಒಳಬಟ್ಟೆ
ಶುದ್ಧವಾದ, ಒಣಗಿದ ಒಳಬಟ್ಟೆ ಧರಿಸಿ. ಅದರಲ್ಲೂ ಕಾಟನ್ ಒಳಬಟ್ಟೆಗಳು ತುರಿಕೆ ಅಥವಾ ಕೆಂಪಗಾಗುವ ಸಮಸ್ಯೆ ತರದು.

ಋತುಮತಿಯಾದಾಗ
ಋತುಚಕ್ರದ ಸಂದರ್ಭದಲ್ಲಿ ಶುದ್ಧವಾದ ಒಳಬಟ್ಟೆ ಧರಿಸುವುದು ಮುಖ್ಯ. ಈ ಸಂದರ್ಭದಲ್ಲಿ ಯೋನಿ ಬಹಳ ಸೂಕ್ಷ್ಮವಾಗಿದ್ದು, ಬೇಗನೇ ವೈರಾಣುಗಳು ಪ್ರವೇಶಿಸುವ ಅಪಾಯವಿದೆ. ಹೀಗಾಗಿ ಆಗಾಗ ಪ್ಯಾಡ್ ಬದಲಾಯಿಸುವುದು, ಕಂಪರ್ಟೇಬಲ್ ಆದ ಪ್ಯಾಡ್ ಧರಿಸುವುದು ಮುಖ್ಯ.  ಒಂದು ವೇಳೆ ಬಟ್ಟೆ ಉಪಯೋಗಿಸುವವರಾದರೆ ಬಿಸಿಲಿಗೆ ಒಣ ಹಾಕಿದ ಶುದ್ಧ ಬಟ್ಟೆಯನ್ನೇ ಬಳಸಿ.

ಸ್ನಾನದ ನಂತರ
ಸ್ನಾನದ ನಂತರ, ಅಥವಾ ಟಾಯ್ಲೆಟ್ ಬಳಿಕ ಗುಪ್ತಾಂಗವನ್ನು ಶುಚಿಗೊಳಿಸುವುದು ಮತ್ತು ಚೆನ್ನಾಗಿ ಒರೆಸಿಕೊಳ್ಳಬೇಕು. ಒದ್ದೆಯಿರುವಾಗ ಒಳಬಟ್ಟೆ ಹಾಕಿಕೊಳ್ಳುವುದರಿಂದ ಕೆಲವೊಮ್ಮೆ ತುರಿಕೆ ಸಮಸ್ಯೆ ಉಂಟಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ